THE BOOK WAS DRENCHED

TEXT FLY WITHIN THE BOOK ONLY

UNIVERSAL LIBRARY

OU 19858

AdVddl | IVSHAINN

ಜೆಂಗಳೂರಿನ " ಶಾಕ್ಯ ಸಾಹಿತ್ಯ ಮಂಟಪದ ಪ್ರಕಟಣೆ

೨೮ ಕತೆ-೧೪ ಚಿತ್ರ

[ಪುಟ ೧೨ + ೮೪]

ಜಿ, ಹಿ, ರಾಜರತ್ನ ಪಾಲಿಯಿಂದ ಕನ್ನಡಿಸಿದುದು

ಮನೋಹರ ಗ್ರಂಥಪ್ರಕಾಶನ ಸಮಿತಿ ಧಾರವಾಡ

[ ಎಲ್ಲ ಹಕ್ಕುಗಳನ್ನು ಕಾದಿರಿಸಿದೆ]

ಬಿ. ಬಿ. ಡಿ. ಪವರ್‌ ಪ್ರೆಸ್‌, ಅರಳೇಪೇಟೆ, ಬೆಂಗಳೂರು ಸಿಟಿ.

ಮೈಸೂರು ಸಂಸ್ಥಾನದ ಶ್ರೀಮನ್‌ ಮಹಾರಾಜರವರಾದ ಶ್ರೀ ನಾಲಡಿ ಕಷ ರಾಜ ಒಡೆಯರ್‌ ಬಹದೂರ್‌ ಕ್ರ ಹ್‌ ಲ್‌ ಜಿ.ಸಿ.ಎಸ್‌.ಐ., ಜಿ.ಬಿ ಇ, ಮಹಾಸ್ವಾಮಿಯವರಿಗೆ ಗ್ರಂಥವನ್ನು ಭಕ್ತಿಯಿಂದ ಅಪ್ಪಣೆ ಪಡೆದು

ಒಪಿ ಸಿದೆ ೦೨

ಜಿ. ಪಿ. ರಾಜರತ್ನಂ ಅವರೆ ಪುಸ್ತಕಗಳು

ತುತ್ತೂರಿ, ಕಡಲೆ ಪುರಿ, ಚುಟಕ, ಗುಲಗಂಜಿ, ಕಲ್ಲು ಸಕ್ಕರ್ಕೆ ಶ್ರೀ ರಾಮಚಂದ್ರ, ಗೌತಮ ಬುದ್ಧ, ಶ್ರೀ ಹರ್ಷ, ಅಶೋಕ ಮೌರ್ಯ.

Rl

ಹನಿಗಳು, ಬೆಳುದಿಂಗಳು, ಶಾಂತಿ, ರತ್ನನ ಪದಗಳು, ಗಂಡುಗೊಡಲಿ, ರತ್ನನ ದೋಸ್ತಿರತ್ನ, ಹತ್ತುವರುಷ್ಕ ಮಹಾಕನಿ ಪುರುಷಸರಸ್ತ್ರ ತಿ.

ರಾನಾ ಾಣಾವರರಾಸಾರಷಾರವಾಾ

ಚೀಣಾದೇಶದ ಬೌದ್ಧ ಯಾತ್ರಿಕರು, ಧರ್ಮದಾನಿ ಬುದ್ಧ, ಬುದ್ದವಚನ "ಪರಿಚಯ, ಮಿಲಿಂದಪ್ರಶ್ನೆ, ಮೂರು ಪಾಲಿ ಸೂತ್ರಗಳು, ಪಾಲಿ ಪಜ್ಜ ಪುಪ್ಪುಂಜಲ್ರಿ, ಬುದ್ದನ ಕತೆಗಳು.

ಮಹಾವೀರನ ಮಾತುಕತೆ, ಭಗರ್ವಾ ಮಹಾವೀರ, ಶ್ರೀ ಗೋಮಟೇಶ್ವರ, ಶ್ರೀ ಪಾರ್ಶ್ವನಾಥ.

ಸಂಪಾದಿಸಿದುವು

ಕಂದನ ಕಾವ್ಯಮಾಲೆ, ಕೆನೆಹಾಲು, ನಮ್ಮನಮ್ಮವರು, ವೈಶಾಖ ಶುಕ್ಲ ಪೂರ್ಣಿಮಾ.

ಬಿನ್ನಹ

“ಲೋಕಪೂಜ್ಯನಾದ ಭಗವಂತ ಗೌತಮಬುದ್ಧನು ತೊಟ್ಟನೆ ಸಮ್ಯಕ್‌ಸಂಬುದ್ಧನಾಗಲಿಲ್ಲ. ತಾನು ಬುದ್ಧನಾಗುವುದಕ್ಕೆ ಅನೇಕ ಕಲ್ಪ ಗಳ ಹಿಂಡೆ, ದೀಪಂಕರಣೆಂಬ ಬುದ್ಧನ ಕಾಲದಲ್ಲಿ, ಆತನು ಸುಮೇಧ ನೆಂಬ ಬ್ರಾಹ್ಮಣನಾಗಿದ್ದ ನು. ದೀಪಂಕರನ ದರ್ಶನದಿಂದ ಪ್ರೇರಿತನಾಗಿ, ತಾನೂ ಮುಂದೆ ಬುದ್ಧ ನಾಗಬೇಕೆಂಬ ಸಂಕಲ್ಪ ತೊಟ್ಟು, ಧರ್ಮದಲ್ಲಿ ನಡೆಯತೊಡಗಿದನು. ಅಂದಿನಿಂದ ಮುಂದ್ಕೆ ತಿರ್ಯಗ್ಗತಿಯಿಂದ ಮಾನುಷ ದೇವಗತಿಗಳ ವರೆಗಿನ ಮೂರೂ ಗತಿಗಳಲ್ಲಿ ಬಹು ಬಾರಿ ಬಂದನು. ಆವಾವ ಗತಿಗಳಲ್ಲಿ ಬಂದರೂ ಅಲ್ಲಲ್ಲಿ ದಾನ, ಶೀಲ್ಕ ನೈಷ್ಟ_ಮ್ಯ, ಪ್ರಜ್ಞಾ, ವೀರ್ಯ, ಕಾಂತಿ, ಸತ್ಯ, ಅಧಿಷ್ಠಾನ, ಮೈತ್ರಿ, ಉಪೇಕ್ಸಾ ಎಂಬ ದಶ ಪಾರಮಿತೆಗಳನ್ನು--ಎಂದರೆ ಅಮಿತಪಾರವಾದ್ಕ ಅಪಾರವಾದ, ಪರಿಪೂರ್ಣ ಗುಣಗಳನ್ನು ಭಾವಿಸಿಕೊಂಡು, ಕಡೆಯ ಭವದಲ್ಲಿ ಕಪಿಲವಸ್ತುವಿನ ಶಾಕ್ಯವಂಶದಲ್ಲ ಅವತರಿಸಿ, ತನ್ನ ಇಪ್ಪ ತ್ತೊಂಬತ್ತನೆಯ ವಯಸ್ಸಿನಲ್ಲಿ ಗೃಹೆತ್ಯಾಗಮಾಡಿ ಪರಿನಿಷ್ಠ ಮಣ ವನ್ನು ಆಚರಿಸಿ, ಆರು ವತ್ಸರಗಳ ತೀವ್ರ ತತ್ವಾನ್ವೇಷಣೆಯ ತುದಿಗೆ ಸಮ್ಯಕ್‌ಸಂಬುದ್ಧನಾದನು. ಆಗಿ, ತನ್ನ ಧರ್ಮಚಕ್ರಪ್ರವರ್ತನದಿಂದ ಬೃಹತ್‌ ಬೌದ್ಧ ಸಂಘವನ್ನು ಸ್ಥಾನಿಸಿದನು. ಆಗಾಗ್ಯ ಸಂಘಕ್ಕೆ ಪ್ರತಿ ಬೋಧಿಸಬೇಕಾಗಿ ಬಂದ ಅವಸರದಲ್ಲಿ ದೃಷ್ಟಾಂತರೂಪವಾಗಿ ತನ್ನ ಪೂರ್ವಜನ್ಮ ವೃತ್ತಾಂತವನ್ನು ಕಥಿಸುತ್ತಿದ್ದನು, ಜನ್ಮದಿಂದ ಜನ್ಮದ ವರೆಗೆ ತನ್ನೊಡನೆ ಜನ್ಮಜನ್ಮಕ್ಕೂ ಬಂಧಿಸಿ ಬಂದ ಸಾಂಫಿಕರ ಕತೆಯನ್ನು ಹೇಳುತ್ತಿದ್ದ ನು” ಎಂದು ಬೌದ್ಧರು ಹೀನಯಾನದವರಾಗಲಿ, ಮಹಾಯಾನದವರಾಗಲಿ ನಂಬುತ್ತಾರೆ.

ಇವುಗಳಲ್ಲಿ, ಬುದ್ಧನ ಪೂರ್ವಜನ್ಮದ ಕತೆಗಳಿಗೆ “ಜಾತಕ?ವೆಂದೂ ಬುದ್ಧನ ಶಿಷ್ಯರಾದ ಭಿಕ್ಸು ಭಿಕ್ಷ್ಟುಣಿಯರ ಪೂರ್ವಕತೆಗಳಿಗೆ “ಅವದಾನ? ನೆಂದೂ ಹೆಸರಿಟ್ಟಿದ್ದಾರೆ. “ಬುದ್ಧವಚನ”ವೆಂದು ಪ್ರಸಿದ್ಧವಾಗಿ ಪಾಲೀ

ಬುದ್ಧನ ಕತೆಗಳು

ಭಾಷೆಯಲ್ಲಿರುವ ಬೌದ್ಧ ಧರ್ಮಸಾಹಿತ್ಯಕ್ಕೆ ಬೌದ್ಧರು ಲಕ್ಷಣವೆಂದು ಕೊಡುವ ಒಂಭತ್ತು ಅಂಗಗಳಲ್ಲಿ “ಜಾತಕ”ವೆಂಬುದು ಏಳನೆಯದು. ಇದೇ “ಬುದ್ಧವಚನ”ಕ್ಕೆ "ತಿಪಿಟಕ” (ಕ್ರಿನಿಟಿಕ)ವೆಂಬುದು ಹೆಚ್ಚು ಪರಿ ಚಿತವಾದ ಹೆಸರು. ಎರಡನೆಯ ಪಿಟಕವಾದ "ಸುತ್ತಪಿಟಿಕ'ದ ಒಳ ಗಿನ ಐದು "ನಿಕಾಯ'ಗಳಲ್ಲಿ ಕಡೆಯದು “ಖುದ್ದಕ ನಿಕಾಯ” (ಕ್ಸುದ್ರಕ ನಿಕಾಯ). "ಖುದ್ದಕನಿಕಾಯ'ದ ಹದಿನ್ಫೈದು ಪುಸ್ತಕಗಳಲ್ಲಿ ಹತ್ತ ನೆಯದಾದ 4 ಜಾತಕಟ್ಮ ಕಥಾನಣ್ಣನಾ” (ಜಾತಕಾರ್ಥ ಕಥಾ ವರ್ಣನಾ) ಎಂಬುದು ೫೪೭ ಜಾತಕಗಳನ್ನು ಒಳಕೊಂಡದ್ದು ; ಹದಿ ಎೂರನೆಯ ಪುಸ್ತಕವೇ “"ಅವದಾನ”, ಕೊನೆಯದಾದ ಚರಿಯಾ ಪಿಟಕ” (ಚರ್ಯಾನಿಟಿಕ)ನೆಂಬ ಹದಿನೈದನೆಯ ಪುಸ್ತಕದಲ್ಲಿ, ಬುದ್ಧನು ಹಿಂದಿನ ಜನ್ಮಗಳಲ್ಲಿ ಆಚರಿಸಿದ ಪಾರಮಿತೆಗಳನ್ನು ಜಾತಕಗಳಿಂದ ಪದ್ಧರೂಪವಾಗಿ ತೋರಿಸುವ ಪ್ರಯತ್ನವಿದ್ದು, ಅದು ಅಪೂರ್ಣವಾಗಿದೆ. ತಾನು ಮುಂದೆ ಬುದ್ಧನಾಗಬೇಕೆಂದು ಅಂದು ಸಂಕಲ್ಪಿಸಿ, ಅನೇಕ ಭವಗಳಲ್ಲಿ ಬಂದು, ಸುಮೇಧನು ವಿವಿಧ ಜನ್ಮಗಳಲ್ಲಿ ವಿವಿಧ ಪಾರಮಿತೆಗಳನ್ನು ಪರಿಪೂರ್ಣಗೊಳಿಸುತ್ತಿದ್ದ ನಸ್ಟೆ. ಹೀಗೆ, ಮುಂದೆ ಬುದ್ಧನಾಗುವುದಕ್ಕೆ ಬೇಕಾದ ಸತ್ವವನ್ನು ಆತನು ಪ್ರತಿಜನ್ಮದಲ್ಲಿಯೂ ಸಂಪಾದಿಸಿಕೊಳ್ಳುತ್ತಿದ್ದನಾದ್ದರಿಂದ ಆಆ ಜನ್ಮಗಳನ್ನೆತ್ತಿದ್ದ ಅವನನ್ನು “ಬೋಧಿಸತ್ತ್ವಿನೆಂದು ಕರೆಯುವುದು ವಾಡಿಕೆ. ಬೋಧಿಸತ್ವನು ಬದುಕಿದ ಬದುಕಿನ ಕತೆಗಳೇ "ಜಾತಕಗಳು. ರೀತಿಯ “ಹಿಂದಿನ ಜನ್ಮ”ದ ಕತೆಗಳನ್ನು ಗೌತಮಬುದ್ಧನು ತನ್ನ “ಇಂದಿನ ಜನ್ಮ”ದಲ್ಲಿ ದೃಷ್ಟಾಂತವಾಗಿ ನಿರೂಪಿಸುತ್ತಿದ್ದು ದರಿಂದ ಪ್ರಕಿ ಜಾತಕಕತೆಯಲ್ಲಿಯೂ ಎರಡು ಭಾಗಗಳಿರಬೇಕಾಗಿ, ಇವೆ. ಪ್ರಕಿ ಜಾತಕವೂ (೧) “ಭಗವಂತ ನಾದ ಬುದ್ಧನು ಇಂತಹ ಕಡೆ ಹೀಗೆ ತಂಗಿರುವಾಗ, ಇಂತಹ ಶಿಷ್ಯರು ಬಂದು ಹೀಗೆ ಹೀಗೆ ನಡೆಯಿತೆಂದು ಗುರುವಿಗೆ ತಿಳಿಸಿದರು. ಆಗ ಗುರು "ಈಗ ಮಾತ್ರ ಹೀಗಾದುದಲ್ಲ ಹಿಂದೆಯೂ ಹೀಗೇ ನಡೆಯಿತು' ಎಂದು ಹೇಳಿ, ಹಿಂದಿನ ಕತೆಯನ್ನು ತಿಳಿಸಿದನು” ಎಂದು ಮೊದಲಾಗಿ; (೨) ಹಿಂದೆ ವಾರಣಾಸಿಯಲ್ಲಿ ಬ್ರಹ್ಮದತ್ತನು ರಾಜ್ಯವಾಳುಕ್ತಿದ್ದಾಗ, ಬೋಧಿ

ಬಿನ್ನಹ

ಸತ್ತನು ಇಂತಹ ಕಡೆ ರೂಪಿನಿಂದ ಹುಟ್ಟಿ ಬಂದಾಗ, ಹೀಗೆ ಹೀಗೆ ನಡೆ ಯಿತು” ಎಂದು ಪೂರ್ವಕತೆಯಿಂದ ಮುಂದುವರಿಯುವುದು. ಕೊನೆಗೆ “ಭಿಕ್ಸುಗಳೆ, ಜನ್ಮದಲ್ಲಿ ಇವನಾಗಿದ್ದವನೇ ಜನ್ಮದಲ್ಲಿ ಇನವನಾಗಿ ದ್ದಾನೆ. ಜನ್ಮದ ವ್ಯಕ್ತಿಗಳು ಇಂದು ಇವರಿವರಾಗಿದ್ದಾರೆ. ಹಿಂದೆ ಹೀಗೆ ನುಡಿದು ಹೀಗೆ ನಡೆದುದು ನಾನೇ” ಎಂದು ಬುದ್ಧನ ಬಾಯಲ್ಲಿ ಬಂದ ಮಾತುಗಳಿಂದ ಪ್ರತಿ ಜಾತಕ ಮುಗಿಯುತ್ತದೆ. ಪ್ರತಿ ಜಾತಕದ ಎರಡು ಭಾಗಗಳಲ್ಲಿ ಮೊದಲನೆಯದು ಸಾಮಾನ್ಯವಾಗಿ ಸಪ್ಪೆ, ಎರಡ ನೆಯದರ ನೆರಳು ಮಾತ್ರ; ಎರಡನೆಯ ಭಾಗವೇ ನಿಜವಾದ, ಸತ ಶೃ ಪೂರ್ಣ "ಜಾತಕೆ'. ಆದ್ದರಿಂದ ಎರಡನೆಯ ಭಾಗವಾದ ಜಾತಕಗಳನ್ನು “ಬುದ್ಧನು ಹೇಳಿದ ಬೋಧಿಸತ್ತನ ಕತೆಗಳು? ಎನ್ನ ಬಹುದು. ಅಥವಾ, ಸಣ್ಣದಾಗಿರಲೆಂದು “ಬುದ್ಧನ ಕತೆಗಳು? ಎಂದರೂ ತಪ್ಪಾಗದು.

ರೀತಿಯಾಗಿ ಜಾತಕ `ದ ಉಗ ಮವನ್ನು ಕುರಿತು ಬೌದ್ಧ ರು ಹೇಳುವುದನ್ನು ಸಂಶೋಧಕರು ಒಪ್ಪುವುದಿಲ್ಲ; ಅದಕ್ಕೆ ಕಾರಣವಿಲ್ಲ ದೆಯೂ ಇಲ್ಲ. ಬುದ್ಧನ ಮಾತುಕತೆ ಅವನ ಕಾಲದಲ್ಲಾ ಗಲಿ ಅದಕ್ಕೆ ಅನಿದೂರಕಾಲದಲ್ಲಾ ಗಲಿ ಗ್ರಂಥಸ್ಥವಾಗಲಿಲ್ಲ; ಕೇವಲ ಮುಖಪಾಠೆ ವಾಗಿತ್ತು. ಅದು ಗ್ರಂಥಸ್ಥ ವಾದುದು ಕ್ರಿ.ಪೂ. ೧ನೆಯ ಶತಮಾನದಲ್ಲಿ, ಸಿಂಹಳದಲ್ಲಿ; ಆದರೆ ಬುದ್ಧ ನಿದ್ದು ದು ಕ್ರಿ.ಪೂ ಆರನೆಯ ಶತಮಾನದಲ್ಲಿ ಮಧ್ಯ ಒಂಜೂಡೇಶದಲ್ಲಿ ಈಗ ನಮಗೆ ದೊರಕಿರುವ "ಜಾತಕ'ವು ಮೂಲಮಾತೃಕೆಯಲ್ಲ: ಮೂಲದ ಮೇಲಿನ " ಅರ್ಥಕಥ'? ಅಥವಾ ವ್ಯಾಖ್ಯಾನ. ಗದ್ಯಪದ್ಯ ಮಿಶ್ರವಾಗಿ ದೊರಕಿರುವ ಜಾತಕಟ್ಟ ಕಥಾವಣ್ಣನಾ” ಗ್ರಂಥದ ಗದ್ಯ ಪದ್ಯಕ್ಕಿಂತ ಅತಿ ಈಚಿನದು. ಪದ್ಯದ ರೂಪು ಭಾಷೆಗಳನ್ನಲ್ಲದೆಹೋದರೂ ಅದರ ಭಾವವನ್ನಾದರೂ ಬುದ್ಧನ ಸಮಕಾಲಿಕವೆಂದು ಒಪ್ಪಬಹುದು ; ಆದರೆ ಗದ್ಯಕ್ಕೆ ಅಷ್ಟು ಪ್ರಾಚೀನತೆ ಕೊಡಲಾರರು. ಅಲ್ಲದೆ ಕತೆಗಳಲ್ಲಿ ಕಚ್ಚಕಸಗಳ ಜೊತೆಗೆ "ರಸಘಟ್ಟ' ಗಳೂ ಸಭ್ಯವೂ ಉದಾತ್ತವೂ ಆದವುಗಳ ಸಾಲಿನಲ್ಲಿಯೇ ಅಸಭ್ಯಗಳೂ ಅನುದಾತ್ತಗಳೂ ಆದ ಕತೆಗಳೂ ದೊರಕುತ್ತವೆ. ಅಲ್ಲಜೆ, “ಜಾತಕ”

ಬುದ್ಧನ ಕತೆಗಳು

ಪುಸ್ತಕದಲ್ಲಿ ತಲೆದೋರುವ ಅನೇಕ ಕತೆಗಳಿಗೆ ಬೀಜವಾಗಲಿ ಸಾಮ್ಯ ವಾಗಲಿ ಸುಲಭವಾಗಿ ಸಿಕ್ಕುತ್ತದೆ. ಸ್ವಯಂ ಬೌದ್ಧರ ಸಿಟಕದ ಇತರ ಪುಸ್ತಕಗಳಲ್ಲಿ ಮಾತ್ರವಲ್ಲ; ಭಾರತದ ಇತರ ಕಥಾಸಾಹಿತ್ಯಕ್ಕೆ ಆಕರ ಗಳಾದ ತಂತ್ರಾಖ್ಯಾಯಿಕಾ, ಪಂಚತಂತ್ರ, ಹಿತೋಸದೇಶ್ಯ, ಕಥಾಸರಿ ತ್ಸಾಗರ ಮುಂತಾದವುಗಳಲ್ಲಿ ಕೂಡ. ಹಿಂದುಗಳ ರಾಮಾಯಣ ಭಾರತ ಗಳ ಕೆಲವು ಉಪಾಖ್ಯಾನಗಳನ್ನೂ ಜೈನಪುರಾಣಗಳ ಹೆಲವು ಕತೆ ಗಳನ್ನೂ ಜಾತಕಗಳಲ್ಲಿ ಕೆಲವು ಹೋಲುತ್ತವೆ. ಇದೂ ಅಲ್ಲದೆ ಕಸಟ ಸಂನ್ಯಾಸಿಯಾಗಿ ಇಲಿಗಳನ್ನು ಕೊಂದ ಬೆಕ್ಕು, ಗೂಳಿಯೊಡನೆ ಮಾಡಿದ ಸ್ನೇಹ ಮುರಿದು ಅದನ್ನು ಕೊಂದ ಸಿಂಹ ಮೊಸಳೆಗೆ ಮೋಸ ಮಾಡಿದ ಮಂಗ, ಸಿಂಹ ಚರ್ಮದ ಕತ್ತೆ, ಮಾನುಗಳನ್ನು ವಂಚಿಸಿ ತಿಂದು ಏಡಿಯ ಕೈಯಲ್ಲಿ ಸತ್ತ ಕೊಕ್ಕರೆ ಕಾಗೆಯನ್ನು ಮೋಸಮಾಡಲು ಯತ್ನಿಸಿದ ನರಿ--ಮುಂತಾಗಿ "ಜಾತಕ'ದಲ್ಲಿ ಕಾಣುವ ಹಲವು ಕತೆಗಳು ಹಿಂದೂದೇಶದ ಕಥಾಸಾಹಿತ್ಯದಲ್ಲಿ ಮಾತ್ರವಲ್ಲ, ಅನ್ಯದೇಶದವುಗಳಲ್ಲೂ ಸಣ್ಣ ಪುಟ್ಟ ವ್ಯತ್ಯಾಸಗಳೊಡನೆ ಮೈದೋರುತ್ತವೆ. ಇಂತಹ ಕಡೆ ಗಳಲ್ಲಿ ಯಾರಿಂದ ಯಾರು ಯಾವಾಗ ಎರವು ತೆಗೆದುಕೊಂಡರೆಂದು ನಿಷ್ಕರ್ಷಿಸುವುದು ಅಷ್ಟು ಸುಲಭವಲ್ಲ.

ಇವೆಲ್ಲಾ ಕಾರಣಗಳನ್ನು ಕಂಡು, “" "ಜಾತಕ' ಪುಸ್ತಕದಲ್ಲಿನ ಕಲವು ಕತೆಗಳ ವಿಷಯಗಳು ಬುದ್ಧನ ಬಾಯಿಂದಲೂ ಅವನ ಶಿಷ್ಯರ ಮ.ಖದಿಂದಲೂ ಬಂದಿರಬೇಕೆಂಬುದರಲ್ಲಿ ಸಂದೇಹವಿಲ್ಲ. ಆದರೆ ಈಗಿ ರುವ ಪುಸ್ತಕವಷ್ಟನ್ನೂ ಬುದ್ಧನ ಕಾಲಕ್ಕೆ ತಗುಲಿಸಲು ಆಗುವುದಿಲ್ಲ. ಪುಸ್ತಕವು ಒಬ್ಬನು ಹೇಳಿ ಬರೆದು ಆದುದಲ್ಲ; ಅನೇಕ ಕಡೆ ಅನೇಕ ರಲ್ಲಿ ಪ್ರಚಾರವಾಗಿದ್ದ ಕತೆಗಳನ್ನು ಸಂಗ್ರಹಿಸಿ ಆದುದು, ಪುಸ್ತಕ. "ಇದನ್ನು ಸಂಕಲನ ಮಾಡಿದ ಸಂಪಾದಕನು ಯಾರೆಂದು ತಿಳಿದಿಲ್ಲ. ಸಂಕಲನಮಾಡಿದ ಕಾಲವೂ ಗೊತ್ತಿಲ್ಲ” ಎಂದು ಸಂಶೋಧಕರು ಅಭಿ ಪ್ರಾಯಹಪಡುತ್ತಾರೆ.

ಅಭಿಪ್ರಾಯವನ್ನು ಒಪ್ಪಿಕೊಂಡರೂ " ಜಾತಕ; ಪ್ರಸ್ತಕದ ಬೆಲೆಗೆ ಏನೂ ಕೊರೆಯಿಲ್ಲ. ಕತೆಗಳ ರಮ್ಯತೆಗಾಗಿ ಮಾತ್ರವಲ್ಲ; ಅವು

ಬಿನ್ನಹ

"ಸುಲಿದ ಬಾಳೆಯ ಹಣ್ಣಿನಂದದಿ' ನೀಡುವ ಧರ್ಮದ ಸಾರಸರ್ವ ಸ್ವಕ್ಕೆ ಮಾತ್ರವಲ್ಲ; ಅಲ್ಲಿ ಕಿಳಿದು ಬರುವ ಪ್ರಾಚಿನ ಭಾರತದ ಸಾಮಾಜಿಕ, ಆರ್ಥಿಕ, ರಾಜಕೀಯ, ಶೈಕ್ಷಣಿಕ ಮುಂತಾದ ನಾನಾಮುಖವಾದ ಸಂಸ್ಕಾರಮಯ ಜೀವನದ ಸಾಕ್ಸ್ಪಾತ್ಕಾರಕ್ಕಾಗಿಯೂ 4 ಜಾತಕ” ಗಳನ್ನು ಜಗತ್ತಿನ ಮೂಲೆಮೂಲೆಗಳಲ್ಲಿ ಜನ ಬೇರೆ ಬೇರೆ ಭಾಸೆಗಳಲ್ಲಿ ಓದುತ್ತಿದ್ದಾರೆ.

ಬರ್ಹತ್‌ ಮತ್ತು ಸಾಂಚಿ (ಕ್ರಿ. ಪೂ ೩ನೆಯ ಶತಮಾನ) ಎಂಬೆಡೆಯ ಸ್ತೂಪಗಳಲ್ಲೂ, ಅಮರಾವತಿ (ಕ್ರಿ. ಶ. ೨ನೆಯ ಶತಮಾನ) ಅಜಂತಗಳೆಲ್ಲೂ, ಜಾವಾದ್ವೀಪದ ಬೊರೊಬುದೂರ್‌ (ಕ್ರಿ. ಶ. ೯ನೇ ಶತಕ), ಬರ್ಮಾದೇಶದ ಪಗಣ (೧೩ನೇ ಶತಕ), ಸಯಾಂದೇಶದ ಸುಖೋದಯ(೧೪ನೇ ಶತಕ)- ಎಂಬಲ್ಲಿನ ಬೃ ಹದ್ದೆ (ವಾಗಾರಗಳೆಲ್ಲಿಯೂ ಚತುರ ರೂವಾರಿಗಳು ಅನೇಕ ಜಾತಕ ಕಥೆಗಳನ್ನು ಕಲ್ಲಿನ ಬಾಯಿಂದ ಹೇಳಿಸಿ ಸೈ ತಾರ್ಥರಾಗಿದ್ದಾ ರೆ

ಇಂತಹೆ ಜಾತಕ ಸಾಹಿತ್ಯದ ಸ್ವಲ್ಪ ಭಾಗವನ್ನೂ ಅದಕ್ಕೆ ಸಂಬಂಧಿ ಸಿದ ಶಿಲಾಶಿಲ್ಪದ ಸ್ವಲ್ಪ ಭಾ ನ್ಬ್ಪೂ ಕನ್ನ ಡಕ್ಕೆ ತಂದ ಸಯ್ದು ನನ್ನ ದು --ಎಂಬುದಿಷ್ಟೇ ನನ್ನ ತೃಪ್ತಿ.

ಪುಸ್ತಕವನ್ನು ಸಿದ್ಧಗೊಳಿಸಲು ಬೇಕಾಗಿದ್ದ "ಜಾತಕ”ದ ಪಾಲೀ ಮೂಲ ಮತ್ತು ಆಂಗ್ಲ ಅನುವಾದಗಳ ಉಪಯೋಗಕ್ಕಾಗಿ ರಾಜಕಾರ್ಯ ಪ್ರನೀಣ ಶ್ರೀ ಎನ್‌. ಎಸ್‌. ಸುಬ್ಬರಾವ್‌, ಎಂ.ಎ. (ಕ್ಯಾಂಟಿಬ್‌), ಬಾರ್‌-ಅಟ್‌-ಲಾ ಅವರಿಗೂ ಮೈಸೂರಿನ ಓರಿಯೆಂಟಲ್‌ ಲೈಬ್ರರಿ, ಯೂನಿವರ್ಸಿಟಿ ಲೈಬ್ರರಿ ಮತ್ತು ಬೆಂಗಳೂರಿನ ಸೆಂಟ್ರಲ್‌ ಕಾಲೇಜು ಲೈಬ್ರರಿಯ ಅಧಿಕಾರಿಗಳಿಗೂ ನಾನು ಖುಣಿಯಾಗಿದ್ದೇನೆ.

೧೦ ಬುದ್ಧನ ಕತೆಗಳು

ಪುಸ್ತಕವನ್ನು ಉಚಿತವಾದ ಚಿತ್ರಗಳಿಂದ ಅಲಂಕರಿಸಲು ಅಪ್ಪಣೆಯನ್ನು ಕೊಟ್ಟ

The Superintendent, Indian Museum, Archxological Section, Calcutta.

The Curator, Central Museum, Lahore. ಇವರಿಗೂ ಬೊರೊಬುದೂರ್‌ ದೇವಾಗಾರದ ಶಿಲ್ಪಗಳ ಚಿತ್ರಸ್ವಾಮ್ಯ ತಮ್ಮದಾದ The Director, Archxological Service in Netherlands, India. ಇವರಿಂದ ಬೇಕಾದುದನ್ನು ದೊರಕಿಸಿಕೊಟ್ಟ Dr. A. Venkatasubbiah, M.A., Ph.D., LL.B., Mysore. ಇವರಿಗೂ, ಬಳ್ಳಿಗಾವೆಯ ದೇವಾಲಯದಿಂದ ಚಿತ್ರ ತೆಗೆದುಕೊಟ್ಟ P. Srinivasa Rao, Esq., M.Sc., Bangalore,

ಇವರಿಗೂ ನನ್ನ ಶುದ್ಧ ಕೃತಜ್ಞತೆಯನ್ನು ಸಲ್ಲಿಸುತ್ತೇನೆ.

೧-೧-೪೦, ಮಲ್ಲೇಶ್ವರ, ಬೆಂಗಳೂರು. Ks

© LL ಟ್ರ Bb ೬b Ub bb ಓಟ. ಐ) ೦೨ ೦೨ pF ೫% ೮೯೬ ೮% ಣಿ 5 DO

pep bb

ಜಾತಕಗಳ ವವರ

ನೃತ್ತ

ಬಕ ನಾನರೇಂದ್ರ ಬಿಡಾಲ ಸುಹನು ಸಿಂಹಚರ್ಮು ಗಾಂಗೇಯ ಕುರಂಗಮೃಗ ಶಿಂಶುಮಾರ

. ಶರ್ಕರ

ಕಂದಗಲಕ

ಕಚ ೩)

ಗರ್ಹಿತ ಹೆರಿತಮಾತ ಮೆಹಾಪಿಂಗಲ ದೂತ ಆರಾಮದೂಷ

- ಉಲೂಕ - ಲೋಲ

ಜವಶಕುನ

. ಚರ್ಮುಶಾಟಿಕ - ಬಾವೆರು

ಸಂಧಿಭೇದಕ

ಕುಕ್ಕುಟ - ವರ್ತಕ

ದರ್ಭಪುಷ್ಪ

» ದೀಪಿ

ಟಿಪು

ಹಿ೨

ವಿಲ, ೨೯,

ಪಿಂ.

ಪ್ಲಿ೧

೩೨. ತಿ ೩೪. ೩೫. ಶಹ, ಪಿ೭. ಪಿಲೆ.

1% Cr ಣ್‌ €ಉ ಆಜ ಓಟ ಎದ

82 ₹385

ಬುದ್ಧನ ಕತೆಗಳು

ಪೂತಿನಾಂಸ ರಾಜೋವಾದ ಗಿರಿದಂತ ಸಾಧುಶೀಲ ಕ್ಸಾಂತಿವಾದಿ ಮಾಂಸ ಸುಜಾತ ಉರಗ ಬಿಸಪುಷ್ಪ ಧೂಮಕಾರಿ ಕಾತ್ಯಾಯನಿ

ಚಿತ್ರಗಳ ವಿವರ

ಧ್ಯಾನಿಬುದ್ಧ ಬಿಡಾಲಜಾತಕ ಕುರುಂಗಮೃಗ ಜಾತಕ ಶಿಂಶುಮಾರ ಜಾತಕ ಶಿಂಶುಮಾರ ಜಾತಕ ಕಚ್ಛಪ ಜಾತಕ ಕಚ್ಛಪ ಜಾತಕ ಆರಾನಮುದೂಷ ಜಾತಕ ಲೋಲ ಜಾತಕ ಸಂಧಿಭೇದ ಜಾತಕ ಕುಕ್ಕುಟ ಜಾತಕ ದರ್ಭಪುಷ್ಪ ಜಾತಕ ಸುಜಾತ ಜಾತಕ ಉರಗ ಜಾತಕ

ಪುಟ ೫೧ ೫೬ ೫೯ ೬೦ ೬೧ ೬೬ ೬೮ ೭೦ ೭೫ ೭೭ ೬೯

ಇಪ್ಪತ್ತೆಂಟು ಕತೆ

ಪಾಲೀ ಜಾತಕ” ಪುಸ್ತಕದಲ್ಲಿರುವ ಕತೆಗಳು ಎಲ್ಲವೂ ಬುದ್ಧನ ಪೂರ್ವಜನ್ಮ ವೃತ್ತಾಂತವನ್ನು ಯಥಾವತ್ತಾಗಿ ತಿಳಿಸುವುವೆಂಬ ಮಾತಿ ನಲ್ಲಿ ನಂಬಿಕೆಯಿಡಲಿ, ಇಡದಿರಲಿ; ಪುಸ್ತಕದಲ್ಲಿನ ಬಹುಮಟ್ಟಿನ ಕತೆಗಳನ್ನು ಜನರಿಗೆ ಧರ್ಮೋಪದೇಶ ಮಾಡುವಾಗ, ನೀತಿಯನ್ನು ಕಲಿಸು ವಾಗ, ಬುದ್ಧನಾಗಲಿ ಅವನ ಶಿಷ್ಯರಾಗಲಿ ಉಪಯೋಗಿಸಿಕೊಂಡಿರ ಬೇಕೆಂದು ಧಾರಾಳವಾಗಿ ನಂಬಬಹುದು.

ಇಂತಹೆ ಇಪ್ಪತ್ತೆಂಟು ಕತೆಗಳನ್ನು ಆಯ್ದು ಕೆಳಗೆ ಕೊಟ್ಟಿದೆ. ಇಲ್ಲ ಹೇಳಬೇಕಾದ ನೀತಿ ಸಾಮಾನ್ಯವಾಗಿ ಗಾಹೆಗಳೆಂಬ ಪದ್ಯದ ರೂಪ ದಲ್ಲಿದೆ. ಪದ್ಯಗಳಲ್ಲಿ ಹೇಳಿದ ನೀತಿಯನ್ನು ಗದ್ಯದ ಕತೆಯ ರೂಪ ದಲ್ಲಿ ರಸವತ್ತಾಗಿ ವಿವರಿಸುವುದು " ಜಾತಕ'ದ ಪದ್ಧತಿ. ಇಂತಹೆ ಕಡೆ ನವುರಾದ, ನಯವಾದ್ಕ ಸಭ್ಯವಾದ, ಹರಿತವಾದ ಹಾಸ್ಯದ ಬಳಕೆಯನ್ನು ವಾನರೇಂದ್ದ ಗಾಂಗೇಯ, ಗರ್ಜಿತ್ತ ಮಹಾಪಿಂಗಲ್ಕ ದೂತ್ಕ ಆರಾಮ ದೂಷಕ, ಚರ್ಮಶಾಟಕ ಮೊದಲಾದ ಕೆಲವು ಜಾತಕಗಳಲ್ಲಿ ಗಮನಿಸ

ಬಹುದು.

ನೃತ್ತ ಜಾತಕ (೩೨) ಹಿಂದೆ, ಪ್ರಥಮ ಕಲ್ಪದಲ್ಲಿ, ಚತುಷ್ಬಾದಗಳು ಸಿಂಹೆವನ್ನೂ ಮತ್ಸ್ಯಗಳು ಆನಂದಮತ್ಸವನ್ನೂ ಪಕ್ಷಿಗಳು ಸುನರ್ಣಹೆಂಸನನ್ನೂ ರಾಜನನ್ನಾಗಿ ಮಾಡಿದವು. ಸುವರ್ಣಹೆಂಸರಾಜನ ಮಗಳಾದ ಮರಿಹೆಂಸದ ರೊಪ ಬಹು ಚೆನ್ನಾಗಿತ್ತು. ಅದಕ್ಕೆ ಅನನು ಒಂದು ನರ ಕೊಟ್ಟನು. ಅದು ತನಗೆ

1

ಬುದ್ಧನ ಕತೆಗಳು

ಇಷ್ಟವಾದ ಗಂಡ ಬೇಕೆಂದು ವರಿಸಿತು. ಹೆಂಸರಾಜನು ಅದಕ್ಕೆ ವರ ಕೊಟ್ಟು, ಬನುವಂತದಲ್ಲಿ ಎಲ್ಲಾ ಪಕ್ಷಿಗಳನ್ನೂ ಕೂಡಿಸಿದನು. ಹಂಸ ನವಿಲು ಮೊದಲಾದ ನಾನಾ ಪ್ರಕಾರದ ಹಕ್ಕಿಗಳ ಗುಂಪು ಬಂದು ಒಂದು ದೊಡ್ಡ ಕಲ್ಲಿನ ಮೇಲೆ ನೆರೆದವು.

ಹಂಸರಾಜನು “ನಿನ್ನ ಚಿತ್ತಕ್ಕೆ ರುಚಿಸಿದ ಸ್ವಾಮಿಯನ್ನು ಬಂದು ಆರಿಸಿಕೊ” ಎಂದು ಮಗಳಿಗೆ ಹೇಳಿ ಕಳಿಸಿದನು. ಅದು ಪಕ್ಷಿಗಳ ಗುಂಪನ್ನು ಕುರಿತು ನೋಡುತ್ತ ಮಣಿಯ ಬಣ್ಣದ ಕತ್ತೂ ಚಿತ್ರವಾದ ಗರಿಯೂ ಉಳ್ಳ ನವಿಲನ್ನು ಕಂಡು “ಇದು ನನ್ನ ಸ್ವಾಮಿಯಾಗಲಿ 3 ಎಂದು ಬಯಸಿತು. ಆಗ ಹಕ್ಕಿ ಗಳ ಗುಂಪು ನವಿಲಿನ ಬಳಿಸಾರಿ, “ಅಯ್ಯ ನವಿಲೆ, ರಾಜನ ಮಗಳು ಗಂಡನನ್ನು ಹುಡುಕುತ್ತ, ಇಷ್ಟು ಹಕ್ಕಿಗಳ ನಡುವೆ ನಿನ್ನನ್ನು ಬಯಸಿರುವಳು” ಎಂದು ಹೇಳಿದವು. ನವಿಲು ಇದುವರೆಗೆ ನೀವು ನನ್ನ ಬಲವನ್ನು ಕಂಡಿಲ್ಲ” ಎಂದು ಅತಿ ಯಾದ ತೃಪ್ತಿಯಿಂದ ಲಜ್ಜೆಯ ಕಟ್ಟನ್ನು ಮುರಿದು, ಆಗಲೇ ದೊಡ್ಡ ಹಕ್ಕಿಯ ಗುಂಪಿನ ನಡುವೆ ರೆಕ್ಕೆಗಳನ್ನು ಹರಡಿ ಕುಣಿಯತೊಡಗಿತು. ಕುಣಿಯುತ್ತ ಮುಚ್ಚುಮರೆಯಿಲ್ಲದಾಯಿತು.

ಸುವರ್ಣಹಂಸರಾಜನು ಲಜ್ಜೆ ಗೊಂಡು & ಇದಕ್ಕೆ ಹೃದಯದಲ್ಲಿ ಲಜ್ಞೆಯಿಲ್ಲ. ಹೊರಗಡೆ ಸಭ್ಯವಾದ ನಡತೆಯಿಲ್ಲ. ಲಜ್ಞೆಯನ್ನೂ ಸಭ್ಯತೆಯನ್ನೂ ಮುರಿದ ಇದಕ್ಕೆ ನಾನು ಮಗಳನ್ನು ಕೊಡುವುದಿಲ್ಲ” ಎಂದು ಹಕ್ಕಿಗಳ ಗುಂಪಿನ ನಡುವೆ ಗಾಹೆ ಹೇಳಿದನು:

4 ಇದರೆ ಕೂಗು ಮನೋಜ್ಞವಾಗಿದೆ; ಹಿಂಭಾಗ ಮೆಚ್ಚುವಂತಿದೆ, ಕತ್ತು ವೈಡೂರ್ಯ ವರ್ಣಕ್ಕೆ ಸಮನಾಗಿದೆ; ಬಿಚ್ಚಿದ ಬಾಲ ಒಂದು ವ್ಯಾಮದ ಅಳತೆಯಿದೆ. ಆದರೂ ಕುಣಿವ ನಿನಗೆ ಮಗಳನ್ನು ಕೊಡವೊಲ್ಲೆ.”

ಹೀಗೆಂದು, ಹೆಂಸರಾಜನು, ಅದೇ ಪರಿಸೆಯ ನಡುವೆ ತನ್ನ ಅಕ್ಕನ ಮಗನಾದ ಒಂದು ಮರಿಹಂಸಕ್ಕೆ ಮಗಳನ್ನು ಕೊಟ್ಟನು. ನವಿಲು

ಇಪ್ಪತ್ತೆಂಟು ಕತೆ

ಹಂಸೆಯ ಮಗಳನ್ನು ಪಡೆಯದೆ ಲಜ್ಜೆ ಗೊಂಡು ಆಗಲೇ ಮೇಲೆದ್ದು ಓಡಿತು. ಹಂಸರಾಜನು ಕೂಡ ತನ್ನ ವಾಸಸ್ಥಾನಕ್ಕೇ ಹೋದನು.

ಬಕೆಜಾತಕೆ (೩೮)

ಹಿಂದೆ, ಬೋಧಿಸತ್ವನು, ಒಂದಾನೊಂದು ಕಾಡಿನಲ್ಲಿದ್ದ ಪದ್ಮ ಸರಸ್ಸನ್ನು ಆಶ್ರಯಿಸಿ ನಿಂತಿದ್ದ ವೃಕ್ಷದಲ್ಲಿ ವೃಕ್ಷ ದೇವತೆಯಾಗಿ ಹುಟ್ಟಿ ದನು. ಆಗ ಇನ್ನೊಂದು ಅಕಿ ದೊಡ್ಡದಲ್ಲದ ಸರಸ್ಸಿನಲ್ಲಿ ಬೇಸಗೆಯ ಕಾಲಕ್ಕೆ ನೀರು ಕಡಮೆಯಾಯಿತು. ಅಲ್ಲಿ ಬಹಳ ಮಾನುಗಳಿದ್ದವು.

ಆಗ ಒಂದು ಬಕ ಮಾನುಗಳನ್ನು ಕಂಡು "ಒಂದಾನೊಂದು ಉಪಾಯದಿಂದ ಮಾನುಗಳನ್ನು ಮೋಸಮಾಡಿ ತಿನ್ನುನೆನು” ಎಂದು ಹೋಗಿ ನೀರಿನ ಬಳಿ ಚಿಂತಿಸುತ್ತ ಕುಳಿತಿತು. ಮಾನುಗಳು ಅದನ್ನು ಕಂಡು “ಎಕೆ ಆರ್ಯ? ಚಿಂತಿಸುತ್ತ ಕುಳಿತಿರುವೆ?” ಎಂದು ಕೇಳಿದುವು.

“ನಿಮ್ಮನ್ನು ಕುರಿತು ಚೆಂತಿಸುತ್ತಿರುವೆನು”

“ನಮ್ಮನ್ನು ಕುರಿತು ಏನು ಚಿಂತಿಸುವ, ಅಯ್ಯ 7?

«ಈ ಸರೋವರದಲ್ಲಿ ನೀರು ಕಡಮೆ. ಆಹಾರ ಕಡಮೆ. ಬಿಸಿಲೋ ಬಹಳ. ಇದಕ್ಕೆ ಮಾನುಗಳು ಏನು ಮಾಡಿಯಾನು? ಎಂದು ನಿಮಗಾಗಿ ಚಿಂತಿಸುತ್ತ ಕುಳಿತಿರುವೆನು.?

"ಹಾಗಾದರೆ, ಏನುಮಾಡೋಣ, ಅಯ್ಯ Pi

“ನೀವು ನನ್ನ ಮಾತಿನಂತೆ ಮಾಡುವುದಾದರೆ ನಾನು ನಿಮ್ಮನ್ನು ಒಬ್ಬೊಬ್ಬರನ್ನಾಗಿ ಕೊಕ್ಕಿನಿಂದ ಹಿಡಿದು ಐದುಬಣ್ಣದ ಪದ್ಮಗಳಿಂದ ಮುಚ್ಚಿದ ಒಂದು ಮಹಾಸರೋವರಕ್ಕೆ ಕೊಂಡೊಯ್ದು ಬಿಡುವೆನು.”

“ಅಯ್ಯ, ಮೊದಲ ಕಲ್ಪದಿಂದ ಹಿಡಿದು ಮಾನುಗಳಿಗೋಸ್ಕರ ಬಕ ಚಿಂಕಿಸಿದುದಿಲ್ಲ ನೀನು ನಮ್ಮನ್ನು ಒಬ್ಬೊಬ್ಬರನ್ನಾಗಿ ತಿನ್ನಲು ಬಯಸುವವನು.

ಬುದ್ಧನ ಕತೆಗಳು

“ನನ್ನನ್ನು ನಂಬಿದ ನಿಮ್ಮನ್ನು ನಾನು ತಿನ್ನು ವುದಿಲ್ಲ. ಸರೋವರ ನಿದೆಯೆಂದು ನನ್ನನ್ನು ನಂಬದಿದ್ದರೆ ನನ್ನೊಡನೆ ಒಂದು ಮಾನನ್ನು ಸರೋವರ ನೋಡಲು ಕಳುಹಿಸಿರಿ.”

ಮಾನುಗಳು ಅದನ್ನು ನಂಬಿ “ಇದು ನೀರಿನ ಮೇಲೂ ನೆಲದ ಮೇಲೂ ಸಮರ್ಥವಾದುದು? ಎಂದು ಒಂದು ಒಕ್ಕಣ್ಣಿನ ಮಹಾಮತ್ಸ್ಯ ವನ್ನು ಆಯ್ದು “ಇದನ್ನು ಕೊಂಡುಹೋಗು” ಎಂದು ಕಳಿಸಿದನು. ಬಕವು ಅದನ್ನು ಹಿಡಿದು ಕೊಂಡೊಯ್ದು ಸರೋವರದಲ್ಲಿ ಬಿಟ್ಟು, ಸಕೋವರ ವನ್ನೆಲ್ಲ ಕಾಣಿಸಿ, ಪುನಃ ಕೊಂಡು ಬಂದು ಮಾನುಗಳ ಬಳಿ ಅದನ್ನು ಬಿಟ್ಟಿತು. ಅದು ಮಾನುಗಳಿಗೆ ಸರೋವರದ ಸಂಪತ್ತನ್ನು ವರ್ಣಿಸಿತು. ಅವು ಅದನ್ನು ಕೇಳಿ ಹೋಗಲು ಬಯಸಿ, “ಒಳ್ಳೆಯದಯ್ಯ, ನಮ್ಮನ್ನೂ ಕೊಂಡು ಹೋಗು” ಎಂದನು. ಬಕವು ಮೊದಲು ಒಕ್ಕಣ್ಣಿನ ಮತ್ಸ್ಯವನ್ನ್ನೇ ಹಿಡಿದು ಸರೋವರದ ತೀರಕ್ಕೆ ಒಯ್ದು ಸರೋವರವನ್ನು ಕಾಣಿಸಿ, ಅದರ ತೀರದಲ್ಲಿದ್ದ ವರಣವೃಕ್ಲೈ ದಲ್ಲಿ ಇಳಿದು ಅದರ ಕವಲು ಕೊಂಬೆಯಲ್ಲಿ ಅದನ್ನು ಎಸೆದು, ಕೊಕ್ಕಿನಿಂದ ಸೀಳಿ ಸಾಯಿಸಿ, ಮಾಂಸ ವನ್ನು ತಿಂದು, ಮೂಳಗಳನ್ನು ವೃಕ ಮೂಲದಲ್ಲಿ ಬೀಳಿಸಿ, ಪುನಃ ಹೋಗಿ “ಆ ಮಾನನ್ನು ಬಿಟ್ಟೆ, ಇನ್ನೊಬ್ಬರು ಬನ್ನಿ” ಎಂದು, ಉಪಾಯದಿಂದ ಒಂದೊಂದನ್ನೂ ಹಿಡಿದು, ಎಲ್ಲಾ ನಿಖಾನುಗಳನ್ನೂ ತಿಂದು ಪುನಃ ಬರುವ ವೇಳೆಗೆ ಒಂದು ಮಾನೂ ಕಾಣಿಸಲಿಲ್ಲ.

ಅಲ್ಲಿ ಒಂದು ಏಡಿ ಉಳಿದಿತ್ತು. ಬಕವು ಅದನ್ನೂ ತಿನ್ನಲು ಬಯಸಿ, “ಅಯ್ಯ ಏಡಿ, ನಾನು ಎಲ್ಲಾ ಮಾನುಗಳನ್ನೂ ಒಯ್ದು ಪದ್ಮಗಳಿಂದ ಮುಚ್ಚಿಹೋದ ಮಹಾಸರೋವರದಲ್ಲಿ ಬಿಟ್ಟೆ. ಬ್ಯಾ ನಿನ್ನನ್ನೂ ಒಯ್ಯುವೆನು ಎಂದಿತು.

ನನ್ನನ್ನು ಹಿಡಿದುಕೊಂಡು ಹೋಗುವುದಾದರೆ ಹೇಗೆ ಹಿಡಿ ಯುತ್ತೀಯೆ ??

" ಕಚ್ಚಿ ಹಿಡಿಯುನೆನು.'

ಇಪ್ಪತ್ತೆಂಟು ಕತೆ

" ನೀನು ಹಾಗೆ ಹಿಡಿದು ಹೋಗುತ್ತ, ನನ್ನನ್ನು ಬೀಳಿಸಿಬಿಡು ತ್ರೀಯೆ. ನಾನು ನಿನ್ನೊಡನೆ ಬರವೊಲ್ಲೆ.?

4 ಹೆದರಬೇಡ. ನಾನು ನಿನ್ನನ್ನು ಚೆನ್ನಾಗಿ ಹಿಡಿದುಕೊಂಡು ಹೋಗುನೆನು.”

ಏಡಿಯು “ಇದು ಮಿಾನುಗಳನ್ನು ಒಯ್ದು ಸರೋವರದಲ್ಲಿ ಬಿಟ್ಟಿಲ್ಲ. ಆದರೆ ನನ್ನನ್ನು ಸರೋವರದಲ್ಲಿ ಬಿಟ್ಟರೆ... ಒಳ್ಳೆಯದು. ಬಿಡದಿದ್ದರೆ ಇದರ ಕತ್ತನ್ನು ಕತ್ತರಿಸಿ ಜೀವ ತೆಗೆಯುವೆನು” ಎಂದು ಚಿಂತಿಸಿ, “ಅಯ್ಯ ಬಕ್ಕ ನೀನು ನನ್ನನ್ನು ಚೆನ್ನಾಗಿ ಹಿಡಿಯಲಾರೆ. ಆದರೆ ನನ್ನ ಹಿಡಿತ ಬಿಗಿಯಾನುದು. ನಾನು ನನ್ನ ಕೊಂಡಿಗಳಿಂದ ನಿನ್ನ ಕತ್ತನ್ನು ಹಿಡಿಯುವುದಾದರೆ, ನಿನ್ನ ಕತ್ತನ್ನು ಬಿಗಿಯಾಗಿ ಹಿಡಿದು ನಿನ್ನೊಡನೆ ಹೊರಡುವೆನು” ಎಂದಿತು.

ಬಕವು ಅದು ತನ್ನನ್ನು ನಂಚಿಸಬಯಸುವುದೆಂದು ತಿಳಿಯದೆ ಒಳ್ಳೆಯದೆಂದು ಒಪ್ಪಿತು. ಏಡಿಯು ತನ್ನ ಕೊಂಡಿಗಳಿಂದ ಕಮ್ಮಾರನ ಇಕ್ಕಳದಂತೆ ಅದರೆ ಕತ್ತನ್ನು ಬಿಗಿಹಿಡಿದು "ಇನ್ನು ಹೊರಡು' ಎಂದಿತು. ಬಕ ಅದನ್ನು ಒಯ್ದು ಸರೋವರವನ್ನು ಕಾಣಿಸಿ ವರಣ ವೃಕ್ಷದ ಕಡೆಗೆ ಹೊರತು.

ಏಡಿಯು “" ಮಾವ, ಸರೋವರ, ಇತ್ತ. ನೀನು ಮತ್ತೆ ಆಕಡೆ ಒಯ್ಯುವೆ? ಎಂದಿತು. ಬಕವು “ನಾನು ಪ್ರಿಯ ಸೋದರ ಮಾವ, ನೀನು ಅತಿ ಸೋದರಳಿಯ!” ಎಂದು ಹೇಳಿ, " ನಿನ್ನನ್ನು ಎತ್ತಿ ಕೊಂಡು ತಿರುಗುವ ದಾಸನೆಂದು ನನ್ನನ್ನು ತಿಳಿದೆಯೇನು? ವರಣ ವೃಕ್ಸದಡಿಯಲ್ಲಿರುವ ಮೂಳೆಯ ರಾಶಿ ನೋಡು. ಎಲ್ಲಾ ಮಾನು ಗಳನ್ನೂ ತಿಂದಂತೆಯೇ ನಿನ್ನನ್ನೂ ತಿನ್ನುವೆನು” ಎಂದಿತು. ಆಗ ಏಡಿಯು " ಮಾನುಗಳ ಮೂಢತ್ವದಿಂದ ನೀನು ಅವುಗಳನ್ನು ತಿಂದೆ. ನೀನು ನನ್ನನ್ನು ತಿನ್ನಲು ನಾನು ಬಿಡವೊಲ್ಲೆ. ನಾನು ನಿನ್ನನ್ನೇ ನಾಶಮಾಡುವೆನು. ನೀನು ಕೂಡ ಮೌಢ್ಯದಿಂದ ನನಗೆ ಮೋಸ ಹೋದುದನ್ನು ತಿಳಿಯೆ, ಸತ್ತರೆ ಇಬ್ಬರೂ ಸಾಯೋಣ. ಹೀಗೆ,

ಬುದ್ಧನ ಕತೆಗಳು

ನಿನ್ನ ತಲೆಯನ್ನು ಕತ್ತರಿಸಿ ನೆಲದಲ್ಲಿ ಬೀಳಿಸುವೆನು” ಎಂದು ಹೇಳಿ, ಇಕ್ಕಳದಂತಹ ಕೊಂಡಿಗಳಿಂದ ಅದರ ಕತ್ತನ್ನು ಹಿಂಡಿತು. ಅದು ಬಾಯಿ ಬಿಟ್ಟುಕೊಂಡು, ಕಣ್ಣಲ್ಲಿ ನೀರು ಸುರಿಸಿ ಮರಣಭಯದಿಂದ ನಡುಗಿ, ಸ್ವಾಮಿ, ನಾನು ನಿನ್ನನ್ನು ತಿನ್ನವೊಲ್ಲೆ. ನನ್ನ ಜೀವವುಳಿಸು? ಎಂದಿತು. ಏಡಿಯು ಹಾಗಾದರೆ, ಹೀಗೆಯೇ ಇಳಿದು ನನ್ನನ್ನು ಸರೋವರದಲ್ಲಿ ಬಿಡು” ಎಂದಿತು. ಬಕವು ಸರೋವರದ ಮೇಲೆ ಇಳಿದು ಬಳಿಯ ಕೆಸರಿನಲ್ಲಿ ನಿಡಿಯನ್ನು ಇಟ್ಟಿತು. ಏಡಿಯ, ಕತ್ತರಿಯಿಂದ ಕುಮುದ ನಾಳವನ್ನು ಕತ್ತರಿಸುವಂತೆ, ಅದರ ಕತ್ತನ್ನು ಕತ್ತರಿಸಿ ಕೊಳದ ನೀರನ್ನು ಹೊಕ್ಕಿತು.

ಆಶ್ಚರ್ಯವನ್ನು ಕಂಡ್ಕು ವರಣವೃಕ್ಷದಲ್ಲಿ ವಾಸಿಸುತ್ತಿದ್ದ ದೇವತೆಯು ಮೆಚ್ಚುತ್ತ ವನವು ಧ್ವನಿ ಕೊಡುವಂತೆ ಮಧುರ ಸ್ವರದಿಂದ ಗಾಹೆ ಹೇಳಿತು;

| ಕೆಟ್ಟಿಬುದ್ದಿಯ ಬಕವು ಏಡಿಯಿಂದ ಸಾವು ಪಡೆದಂತೆ ಅತಿ ಕೆಟ್ಟಬುದ್ದಿಯವರಿಗೆ ಕೆಟ್ಟ ತನದಿಂದ ಸುಖನಾಗದು.”

ನಾನರೇಂದ್ರ ಜಾತಕೆ (೫೭)

ಹಿಂದೆ, ವಾರಣಾಸಿಯಲ್ಲಿ ಬ್ರಹ್ಮದತ್ತನು ರಾಜ್ಯವಾಳುತ್ತಿದ್ದಾಗ ಬೋಧಿಸತ್ವನು ಕನಿಯಾಗಿ ಹುಟ್ಟಿ, ಕ್ರಮವಾಗಿ ಬೆಳೆದು ಕುದುರೆಮರಿ ಯಷ್ಟು ದೊಡ್ಡವನಾಗಿ ಕಸ್ಟಸಹಿಷ್ಣುವಾಗಿ ಒಂಟಿಯಾಗಿ ಸಂಚರಿಸುತ್ತ ನದೀತೀರದಲ್ಲಿ ವಿಹೆರಿಸುತ್ತಿದ್ದ ನು. ನದಿಯ ನಡುನೆ ನಾನಾಪ್ರಕಾರ ವಾದ ಮಾವು ಹಲಸುಗಳ ಹೆಣ್ಣು ತುಂಬಿದ ಮರಗಳ ಒಂದು ದ್ವೀಸ ವಿತ್ತು. ಆನೆಯ ಬಲವುಳ್ಳ ವನಾಗಿ ಕಷ್ಟಸಹಿಷ್ಣು ವಾದ ಬೋಧಿಸತ್ವನು ನದಿಯ ಈಜೆ ದಡದಿಂದ ಹಾರಿ ಪೀಪದ ಕಡೆ ನದಿಯ ನಡುವೆ ಒಂದು ಕಲ್ಲಿನ ಕೋಡುಂಟು--ಅದರಲ್ಲಿ ಬಿದ್ದು, ಅಲ್ಲಿಂದ ನೆಗೆದು ದ್ವೀಪದಲ್ಲಿ ದುಮುಕುವನು. ಅಲ್ಲಿ ನಾನಾಪ್ರಕಾರವಾದ ಹಣ್ಣುಗಳನ್ನು

ಇಪ್ಪತ್ತೆಂಟು ಕತೆ

ತಿಂದು ಸಾಯಂಕಾಲದಲ್ಲಿ ಅದೇ ಉಪಾಯದಿಂದ ಮರಳಿಬಂದು, ತನ್ನ ವೂಸಸಾ ನದಲ್ಲಿ ವಾಸಮಾಡಿ, ಮಗುದಿನವೂ ಹಾಗೆಯೇ ಮಾಡುವನು. ರೀತಿಯಲ್ಲಿ ಅನನು ಅಲ್ಲಿ ನಾಸಿಸುತ್ತಿದ್ದನು.

ಕಾಲದಲ್ಲಿ ಒಂದು ಮೊಸಳೆ ತನ್ನ ಮಡದಿಯೊಡನೆ ನದಿಯಲ್ಲಿ ವಾಸಮಾಡಿಕೊಂಡಿತ್ತು. ಜೋಧಿಸತ್ವನು ಆಚೆ ಈಚೆ ಹೋಗುವುದನ್ನು ಮೊಸಳೆಯ ಹೆಂಡತಿ ಕಂಡು ಬೋಧಿಸತ್ತನ ಹೃದಯಮಾಂಸದಲ್ಲಿ ಬಯಕೆ ತಾಳಿ “ಅಯ್ಯ, ವಾನರೇಂದ್ರನ ಹೈದಯಮಾಂಸವನ್ನು ನಾನು ಬಯಸುತ್ತೇನೆ” ಎಂದು ಮೊಸಳೆಗೆ ಹೇಳಿತು. ಮೊಸಳೆ “ಒಳ್ಳೆಯದು. ಸಡೆಯುವೆಯಂತೆ” ಎಂದು ಹೇಳಿ "ಇಂದು ಸಂಜೆ ದ್ವೀಪದಿಂದ ಬರು ವಾಗ ಅದನ್ನು ಹಿಡಿಯುನೆನು” ಎಂದು ಹೋಗಿ ಹೊಳೆಯ ನಡುವಿನ

ಕಲ್ಲಿನ ತುದಿಯಲ್ಲಿ ನಿಂತಿತು.

ಬೋಧಿಸತ್ತನು ಹಗಲೆಲ್ಲ ತಿರುಗಾಡಿ ಸಾಯಂಕಾಲಕಾಲದಲ್ಲಿ ದ್ವೀಪದಲ್ಲಿ ನಿಂತುಕೊಂಡಂತೆಯೇ ಕಲ್ಲನ್ನು ಕುರಿತು ನೋಡಿ "ಈ ಕಲ್ಲು ಹೆಚ್ಚು ಎತ್ತರವಾದಂತೆ ತೋರುತ್ತದೆ. ಏನು ಕಾರಣ? ಎಂದು ಚೆಂಕಿಸಿದನು. ತಾನು ಯಾವಾಗಲೂ ನೀರಿನ ಅಳತೆಯನ್ನೂ ಕಲ್ಲಿನ ಅಳತೆಯನ್ನೂ ತಿಳಿದುಕೊಳ್ಳುತ್ತಿದ್ದು ದರಿಂದ "ಇಂದು ನದಿಯಲ್ಲಿ ನೀರು ಕಡಮೆಯಾಗಿಲ್ಲ, ಹೆಚ್ಚೆಯೂ ಇಲ್ಲ. ಆದರೂ ಕಲ್ಲು ದೊಡ್ಡ ದಾಗಿ ತೋರುತ್ತದೆ. ನನ್ನನ್ನು ಹಿಡಿಯುವುದಕ್ಕಾಗಿ ಯಾವುದಾದರೂ ಮೊಸಳೆ ಮಲಗಿರಬೇಕು” ಎಂದುಕೊಂಡು, “ಇದನ್ನು ವಿಮರ್ಶೆ ಮಾಡೋಣ” ಎಂದು ಅಲ್ಲಿಯೇ ನಿಂತು ಕಲ್ಲಿನೊಡನೆ ಮಾತನಾಡುವಂತೆ ಭೃ ಕಲ್ಲೆ!” ಎಂದು ಕೂಗಿ, ಮಾರುತ್ತರ ಬರದಿರಲು ಮೂರುಸಲ ಹಾಗೆಯೇ ಕೂಗಿದನು. “ಈ ಕಲ್ಲೇಕೆ ಉತ್ತರ ಕೊಡುವುದಿಲ್ಲ?” ಎಂದು ವಾನರವು ಪುನಃ “ವಿ, ಕಲ್ಲೆ | ಹೊತ್ತು ಏಕೆ ಉತ್ತರ ಕೊಡುವು ದಿಲ್ಲ?” ಎಂದಿತು. ಆಗ ಮೊಸಳೆಯು “ಓಹೊ, ಮಿಕ್ಕ ದಿನಗಳಲ್ಲಿ ಕಲ್ಲು ವಾನರೇಂದ್ರಫಿಗೆ ಉತ್ತರ ಕೊಟ್ಟಿತು. ಅದರ ಉತ್ತರವನ್ನು ನಾನು ಕೊಡುವೆನು ಎಂದು ಚಿಂತಿಸಿ, “ಏನು ನಾನರೇಂದೃ?” ಎಂದಿತು.

ಬುದ್ಧನ ಕತೆಗಳು " ನೀನು ಯಾರು?” ನಾನು, ಮೊಸಳೆ.” ಆಲ್ಲಿ ಏಕೆ ಮಲಗಿರುನೆ?” ನಿನ್ನ ಹೃದಯ ಮಾಂಸವನ್ನು ಪಡೆಯುವುದಕ್ಕೋಸ್ಕರ.?

ಆಗ ಬೋಧಿಸತ್ತನು, “ನನಗೆ ಹೋಗುವುದಕ್ಕೆ ಬೇರೆ ದಾರಿಯಿಲ್ಲ. ಇವತ್ತು ನಾನು ಮೊಸಳೆಗೆ ಮೋಸಮಾಡತಕ್ಕುದು” ಎಂದು ಚಿಂತಿಸಿ ಅಯ್ಯ ಮೊಸಳೆ, ನಾನು ನನ್ನನ್ನು ನಿನಗೆ ಒಪ್ಪಿಸುತ್ತೇನೆ. ನೀನು ಬಾಯಿ ತೆರೆದು ನಾನು ನಿನ್ನ ಬಳಿ ಬಂದಾಗ ಹಿಡಿದುಕೊ” ಎಂದನು. ಮೊಸಳೆಗಳು ಬಾಯಿ ಬಿಟ್ಟಾಗ, ಕಣ್ಣುಗಳನ್ನು ಮುಚ್ಚು ವುವು. ಆದ್ದರಿಂದ, ಅದು ಯೋಚಿಸದೆ ಬಾಯಿಬಿಟ್ಟಾಗ, ಅದರ ಕಣು ಮುಚಿ ತು. ಹೀಗೆ ಅದು ಬಾಯಿಬಿಟ್ಟು ಕಣು ಮುಚಿ ಟಿ? ಮಲಗಿದ ಸ್ಥಿತಿಯನ್ನು ಬೋಧಿಸತ್ವನು ತಿಳಿದು, ದ್ವೀಪದಿಂದ ನೆಗೆದು ಹೊರಟ್ಕು ಮೊಸಳೆಯ ತಲೆಯನ್ನು ಮೆಟ್ಟಿ, ಅಲ್ಲಿಂದ ಹಾರಿ ಮಿಂಚಿನಂತೆ ಮಿಂಚಿ ಆಚೆತೀರದಲ್ಲಿ ನಿಂತನು.

ಮೊಸಳೆ ಆಶ್ಚರ್ಯವನ್ನು ಕಂಡು ವಾನರೇಂದ್ರನು ಅತಿ ಆಶ್ಚರ್ಯವನ್ನು ಮಾಡಿದನು » ಎಂದು ಚಿಂತಿಸಿ, 4“ ಭೋ, ವಾನರೇಂದ್ರ ! ಲೋಕದಲ್ಲಿ ನಾಲ್ಕು ಗುಣಗಳಿಂದ ಕೂಡಿದವನು ಶತ್ರುಗಳನ್ನು ಜಯಿಸುವನು. ಇವೆಲ್ಲವೂ ನಿನ್ನಲ್ಲಿ ಇವೆಯೆಂದು ತಿಳಿದಿದ್ದೇನೆ” ಎಂದು ಹೇಳಿ, ಗಾಹೆ ಹೇಳಿತು:

ವಾನರೇಂದ್ರ! ನಿನ್ನಂತೆ ಸತ್ಯ, ಧರ್ಮ, ಧೃತಿ, ತ್ಯಾಗ್ಯ--ಎಂಬ ನಾಲ್ಕು ಗುಣಗಳುಳ್ಳವನು ಶತ್ರುವನ್ನು ಹಿಮ್ಮೆಟ್ಟಿ ಸುವನು.”

ಹೀಗೆಂದು ಮೊಸಳೆಯು ಬೋಧಿಸತ್ವನನ್ನು ಪ್ರಶಂಸೆ ಮಾಡಿ ತನ್ನ ವಾಸಸ್ಥಾನಕ್ಕೆ ಹೋಯಿತು.

(aT 6 ಟತೆ “VN "0[೫]00[15%)೫[ರೂಗ್ಮಿ "ಳೆ I] : 4591270) (910ಡ[ "5005[19019[ರ UI KoA "'ಟ೨೩1 "3012811([ : 21312400)

ಇಡಿ) (೧೯೮) ೩೩೬೫೧ಐಣಿ

ಕುರುಂಗಮೃಗ ಜಾತಕ (೨೦೬)

(Copyright : Director, Archxological Survey in Netherlands, India Courtesy : Dr. A. Venkatasubbiah, M.A., Ph.D. LL.B.)

ಇಪ್ಪತ್ತೆಂಟು ಘತ್ರೆ

ಬಿಡಾಲ* ಜಾತಕ (೧೨೮)

ಹಿಂದೆ, ಬ್ರಹ್ಮದತ್ತನು ವಾರಣಾಸಿಯಲ್ಲಿ ರಾಜ್ಯವಾಳುತ್ತಿದ್ದಾಗ, ಬೋಧಿಸತ್ತನು ಮೂಸಿಕವಾಗಿ ಹುಟ್ಟ, ಬುದ್ಧಿ ವಂತನಾಗಿ, ಹಂದಿಯ ಮರಿಯಂತೆ ಮಹಾಶರೀರವುಳ್ಳವನಾಗಿ, ಅನೇಕ ನೂರು ಮೂಷಕ ಪರಿವಾರದೊಡನೆ ಕಾಡಿನಲ್ಲಿ ವಿಹೆರಿಸುತ್ತಿದ್ದನು.

ಆಗ ಒಂದು ಸೃಗಾಲವು ಅಲ್ಲಲ್ಲಿ ತಿರುಗಾಡುತ್ತ, ಇಲಿಗಳ ಗುಂಪನ್ನು ಕಂಡು "4 ಇಲಿಗಳಿಗೆ ಮೋಸಮಾಡಿ ತಿನ್ನುವೆನು” ಎಂದು ಚಿಂತಿಸಿ ಮೂಹಿಕಗಳ ಮನೆಗೆ ಸಮಾಪವಾಗಿ ಸೂರ್ಯ ಐಗೆದುರು ನಿಂತು, ಗಾಳಿಯನ್ನು ಕುಡಿಯುತ್ತ, ಒಂಬಿಕಾಲಲ್ಲಿ ನಿಂತಿತು. ಬೋಧಿಸತ್ವನು ಆಹಾರಕ್ಕೆ ತಿರುಗುವಾಗ ಅದನ್ನು ಕಂಡು, ಅದು ಶೀಲವಂತನಾಗಿರಬೇಕೆಂದು ಅದರ ಬಳಿಗೆ ಹೋಗಿ ಭನ್ನೇ, ನಿನಗೆ ಏನು ಹೆಸರು?” ಎಂದು ಪ್ರಶ್ನಿಸಿದನು.

ನನ್ನ ಹೆಸರು--ಧರ್ಮಿಕ.”

ನಾಲ್ಕ ಕಾಲುಗಳನ್ನು ಭೂವಿ:ಯಲ್ಲಿಡದೆ ಒಂಟಿಕಾಲಲ್ಲ ಏಕೆ ರಿಂಕಿರುವೆ?

“ನಾನು ನಾಲ್ಕೂ ಕಾಲಿಟ್ಟು ನೆಲದಲ್ಲಿ ನಿಂತರೆ, ಭೂಮಿ ತಾಳ ಲಾರದು. ಆದ್ದರಿಂದ ಒಂದೇ ಕಾಲಲ್ಲಿ ನಿಂತಿರುವೆನು.

« ಬಾಯಿ ಏಕೆ ತೆರೆದುಕೊಂಡು ನಿಂತಿರುವೆ?”

«ನಾನು ಬೇರೇನೂ ತಿನ್ನು ವುದಿಲ್ಲ. ಗಾಳಿಯೇ ಆಹಾರ.” ಸೂರ್ಯನಿಗೆ ಎದುರಾಗಿ ಏಕೆ ನಿಂತಿರುವೆ)?

ಸೂರ್ಯನಿಗೆ ನಮಸ್ಕರಿಸುತ್ತಿ ರುವೆನು.”

ಗಾ ರಾಂ ದಂ ಜರಾ ಪಾ ಸಾ

* ಜಾತಕದ ಹೆಸರಿನಲ್ಲಿಯೂ ಮುಂದೆ ಗಾಹೆಯಲ್ಲಿಯೂ "ಬೆಕ್ಕಿ'ನ ಸುದ್ದಿ ಬರುವುದಾದರೂ ಕತೆಯಲ್ಲಿ" ಸೃಗಾಲ'ನೆಂದಿದೆ.

೧೦ ಬುದ್ಧನ ಕತೆಗಳು

ಬೋಧಿಸತ್ವನು ಅದರ ಮಾತು ಕೇಳಿ, ಇದು ಶೀಲವಂತನಾಗಿರ ಬೇಕೆಂದುಕೊಂಡು ಅಂದಿನಿಂದ ಇಲಿಗಳ ಗುಂಪಿನೊಡನೆ ಹಗಲೂ ಸಂಜೆ ಅದರ ಸೇವೆಗೆ ಹೋಗುತ್ತಿದ್ದನು.

ಹೀಗೆ ಅವು ಸೇವೆಮಾಡಿ ಹೋಗುವಾಗ, ಸೃಗಾಲವು ಕಟ್ಟಕಡೆಯ ಇಲಿಯನ್ನು ಹಿಡಿದು, ಅದರ ಮಾಂಸವನ್ನು ತಿಂದು, ನುಂಗಿ, ಬಾಯಿ ಒರಸಿ ಕುಳಿತುಬಿಡುತ್ತಿತ್ತು. ಕ್ರಮವಾಗಿ ಇಲಿಗಳ ಗುಂಪು ತೆಳ್ಳ ಗಾಯಿತು. ಇಲಿಗಳು ಹಿಂದೆ, ನಾವು ಬಿಲದಿಂದ ಹೊರಡುವಾಗ ದಟ್ಟವಾಗಿದ್ದ ವು. ಈಗ ಶಿಥಿಲವಾಗಿರುವೆವು.. ಈಗ ಬಿಲ ತುಂಬುವು ದಿಲ್ಲ. ಇದೇಕೆ?” ಎಂದು ಅದನ್ನು ಬೋಧಿಸತ್ತನಿಗೆ ಕಿಳಿಸಿದವು. ಬೋಧಿ ಸತ್ವನು «ಏನು ಕಾರಣದಿಂದ ಇಲಿಗಳು ತೆಳ್ಳಗಾದವು?” ಎಂದು ಚಿಂತಿ ಸುತ್ತ ಸೃಗಾಲದಲ್ಲಿ ಶಂಕೆಪಟ್ಟು, ¢ ಇದನ್ನು ವಿಮರ್ಶಿಸಬೇಕು' ಎಂದು, ಸೇವೆಯ ಸಮಯದಲ್ಲಿ ಮಿಕ್ಕ ಇಲಿಗಳನ್ನು ಮುಂದೆ: ಮಾಡಿಕೊಂಡು ತಾನು ಕಡೆಗಾದನು. ಸೃಗಾಲವು ಅವನ ಮೇಲೆ ಹಾರಿತು. ಬೋಧಿ ಸತ್ತನು ಸೃಗಾಲವು ತನ್ನನ್ನು ಹಿಡಿಯಲು ಹಾರುವುದನ್ನು ಕಂಡು, ಭೋ ಸೃಗಾಲ, ನಿನ್ನ ಗಾಳಿ ತೆಗೆದುಕೊಳ್ಳುವಿಕೆಯು ಧರ್ಮಕ್ಕಾಗಿ ಯಲ್ಲ. ಇತರರನ್ನು ಹಿಂಸಿಸುವುದಕ್ಕಾಗಿ ಧರ್ಮವನ್ನು ಧ್ವಜ ಮಾಡಿ ಕೊಂಡು ತಿರುಗುತ್ತಿದ್ದೀಯೆ” ಎಂದು ಹೇಳಿ, ಗಾಹೆ ಹೇಳಿದನು:

“ಧರ್ಮವನ್ನು ಧ್ವಜ ಮಾಡಿಕೊಂಡು, ಗುಟ್ಟಾಗಿ ಪಾಪವಾಚರಿಸಿ, ಲೋಕದಲ್ಲಿ ಇರುವವರಲ್ಲಿ ವಿಶ್ವಾಸವುಂಟುಮಾಡುವುದಕ್ಕೆ ಬಿಡಾಲವ್ರತ”ನೆಂದು ಹೆಸರು.”

ಮೂಸಿಕರಾಜನು ಹೀಗೆ ಮಾತನಾಡುತ್ತಲೇ ಅದರ ಮೇಲೆ ಎದ್ದು ಅದರ ಕತ್ತಮೇಲೆ ಬಿದ್ದು ವಸಡಿನ ಅಡಿಗಂಟಿಲೊಳೆಗಿನ ನಾಳವನ್ನು ಕಚ್ಚಿ, ಗಂಟಲನಾಳವನ್ನು ಸೀಳಿ ಸಾಯಿಸಿತು. ಇಲಿಗಳ ಗುಂಪು ಹಿಂದಿರುಗಿ ಸೃಗಾಲವನ್ನು ನಿರಮುರಾಯಿಂದು ತಿಂದು ಹೋದವು. ಮೊದಲು ಬಂದವಕ್ಕೆ ಮಾಂಸ ಸಿಕ್ಕಿತು ಬಳಿಕ ಬಂದನಕ್ಕೆ ಸಿಕ್ಕಲಿಲ್ಲ.

ಅಂದಿನಿಂದ ಇಲಿಗಳ ಗುಂಪಿಗೆ ನಿರ್ಭಯವಾಯಿತು.

ಇಪ್ಪತ್ತೆಂಟು ಫತೆ ೧೧

ಸುಹನು ಜಾತಕ (೧೫೮)

ಹಿಂದೆ, ವಾರಣಾಸಿಯಲ್ಲಿ ಬ್ರಹ್ಮೆದತ್ತನು ರಾಜ್ಯನಾಳುತ್ತಿದ್ದಾಗ, ಬೋಧಿಸತ್ವನು ಅವನ ಸರ್ವಾರ್ಥಕನೂ ಅರ್ಥಧರ್ಮಗಳನ್ನು ಅನು ಶಾಸನೆ ಮಾಡುವ ಅಮಾತ್ಯನೂ ಆಗಿದ್ದನು. ರಾಜನು ಕೊಂಚ ಧನಲೋಭದ ಸ್ರಕೃತಿಯವನು. ಅವನ ಬಳಿ ಮಹಾಶೋಣವೆಂಬ ತುಂಟಿ ಕುದುರೆಯಿತ್ತು. ಆಗ, ಉತ್ತರಾಪಥದ ಕುಡುರೆವ್ನಾಪಾರಿಗಳು ಐನೂರು ಕುದುರೆಗಳನ್ನು ತಂದರು ; ಕುದುರೆಗಳು ಬಂದುದನ್ನು ರಾಜನಿಗೆ ತಿಳಿಸಿದರು. ಅದಕ್ಕೆ ಮೊದಲು ಬೋಧಿಸತ್ವನು ಕುದುರೆಗಳಿಗೆ ಬೆಲೆಕಟ್ಟ, ಬೆಲೆಯನ್ನು ಕಡಮೆಮಾಡದೆ ಕೊಡಿಸುತ್ತಿದ್ದನು. ರಾಜನು ಅದಕ್ಕಾಗಿ ಅವನನ್ನು ಸಹಿಸದೆ ಬೇರೆ ಅಮಾತ್ಯನನ್ನು ಕರೆದು “ಅಯ್ಯಾ, ಕುದುರೆ ಗಳಿಗೆ ಬೆಲೆಕಟ್ಟು. ಬೆಲೆ ಕಟ್ಟ, ಮೊದಲು ಮಹಾಶೋಣವನ್ನು ಕುದುರೆಗಳ ನಡುವೆ ಹೋಗುವಂತೆ ಬಿಡು. ಕುದುರೆಗಳನ್ನು ಕಡಿಯಿಸಿ ಗಾಯಗೊಳಿಸಿ, ಅವು ದುರ್ಬಲವಾದಾಗ ಬೆಲೆಯನ್ನು ಇಳಿಸಿಬಿಡು” ಎಂದನು. ಅವನು ಒಳ್ಳೆಯದೆಂದು ಒಪ್ಪಿ ಹಾಗೆಯೆ ಮಾಡಿದನು.

ಕುದುರೆಯ ವ್ಯಾಪಾರಿಗಳು ಖಿನ್ನರಾಗಿ ಅವನು ಮಾಡಿದ ಕಾರ್ಯ ವನ್ನು ಬೋಧಿಸತ್ವರಿಗೆ ತಿಳಿಸಿದರು. ಬೋಧಿಸತ್ವನು “ನಿಮ್ಮ ನಗರದಲ್ಲಿ ತುಂಟ ಕುದುರೆಯಿಲ್ಲವೆ?” ಎಂದು ಕೇಳಿದನು. “ಸುಹೆನುವೆಂಬ ತುಂಟಿ ಕುದುರೆ, ಚಂಡವಾದದ್ದು, ಪರುಷವಾದದ್ದು, ಉಂಟು ಸ್ವಾಮಿ” ಎಂದು ಅವರು ಹೇಳಲು, “ಹಾಗಾದರೆ ಪುನಃ ಬರುವಾಗ ಕುದುರೆಯನ್ನು ಕರೆತನ್ನಿರಿ” ಎಂದು ಬೋಧಿಸತ್ತನು ಹೇಳಿದುದಕ್ಕೆ ಅವರು ಸಮ್ಮ ತಿಸಿ ಬರುವಾಗ ತುಂಟಿ ಕುದುರೆಯನ್ನು ಹಿಡಿದುಕೊಂಡು ಬಂದರು.

ಕುದುರೆಯ ವ್ಯಾಪಾರಿಗಳು ಬಂದುದನ್ನು ಕೇಳಿ ರಾಜನು ಸಿಂಹ ಪಂಜರ(ಕಿಟಕಿ)ವನ್ನು ಬಿಚ್ಚಿ, ಕುದುರೆಗಳನ್ನು ಕುರಿತು ನೋಡಿ ಮಹಾಶೋಣವನ್ನು ಬಿಡಿಸಿದನು. ವ್ಯಾಪಾರಿಗಳು ಮಹಾಶೋಣ ಬರುವುದನ್ನು ಕಂಡು ಸುಹೆನುವನ್ನು ಬಿಟ್ಟರು. ಅವು ಒಂದನ್ನೊಂದು ಬಳಿಸಾರಿ, ಪರಸ್ಪರ ಮೈನೆಕ್ಗುತ್ತ ನಿಂತವು.

೧೨ ಬುದ್ಧನ ಕತೆಗಳು

ರಾಜನು ಬೋಧಿಸತ್ವನನ್ನು ಕುರಿತು “ಗೆಳೆಯ, ಎರಡು ತುಂಟಿ ಕುದುರೆಗಳು ಇತರರೊಡನೆ ಚಂಡವಾಗಿ ಪರುಷವಾಗಿ ಸಾಹಸ ದೊಡನೆ ವ್ಯವಹೆರಿಸುವುವು. ಇತರ ಕುದುರೆಗಳನ್ನು ಕಚ್ಚಿ ಗಾಯವುಂಟು ಮಾಡುವುವು. ಆದಕೆ ಒಂದರೊಡನೊಂದು ಮೈನೆಕ್ಕುುತ್ತ ಒಕ್ಕಟ್ಟನಿಂದ ನಿಂತಿವೆ. ಇದು ಏಕೆ?” ಎಂದನು.

ಬೋಧಿಸತ್ವನು “ಇವುಗಳ ಶೀಲ ಬೆ:ರೆ ಬೇರೆಯಲ್ಲ, ಮಹಾರಾಜ. ಇವು ಶೀಲದಲ್ಲೂ ಸ್ವಭಾವದಲ್ಲೂ ಒಂದೇ ಆಗಿವೆ” ಎಂದು ಹೇಳುತ್ತ ಎರಡು ಗಾಹೆಗಳನ್ನು ಹೇಳಿದನು:

4 ಶೋಣ ಸುಹನುಗಳ ಶೀಲ ಬೇರೆ ಬೇರೆಯಲ್ಲ. ಸುಹನುವಿನಂತೆಯೇ ಶೋಣ. ಎರಡರ ಗಮನವೂ ಒಂದೇ. ಒರಟುತನದಿಂದ, ಕೆಟ್ಟಬುದ್ದಿಯಿಂದ, ಸದಾ ಕಟ್ಟನ್ನು ಕಡಿಯುವುವು. (ಆದರೆ) ಪಾಪದಿಂದ ಪಾಪವೂ, ಕೆಟ್ಟಿದ್ದರಿಂದ ಕೆಟ್ಟದ್ದೂ ಶಮನನಾಗುವದು.”

ಹೀಗೆ ಹೇಳಿ ಬೋಧಿಸತ್ತನು “ರಾಜನೆಂಬವನು ಅಭಿಲುಬ್ಧನಾಗು ವುದು ತಕ್ಕುದಲ್ಲ; ಇತರರ ಸ್ವತ್ತನ್ನು ನಾಶಮಾಡುವುದು ಸರಿಯಲ್ಲ” ಎಂದು ರಾಜನಿಗೆ ಬುದ್ಧಿಹೇಳಿ, ಕುದುರೆಗಳಿಗೆ ಬೆಲೆ ಕಟ್ಟಿಸಿ ಮೊದಲಿ

ನಂತೆ ಬೆಲೆ ಕೊಡಿಸಿದನು. ಕುದುರೆಯ ವ್ಯಾಪಾರಿಗಳು ಎಂದಿನಂತೆ ಬೆಲೆ ಪಡೆದು ಹರ್ಷ ತೃಪ್ತಿಗಳಿಂದ ಹೋದರು. ರಾಜನು ಕೂಡ ಬೋಧಿಸತ್ವನ ಬುದ್ಧಿವಾದ

ದಲ್ಲಿ ನಿಂತು, ತನ್ನ ಕರ್ಮಕ್ಕೆ ತಕ್ಕಂತೆ ಹೋದನು.

ಸಿಂಹಚರ್ಮ ಜಾತಕೆ (೧೮೯)

ಹಿಂದೆ ವಾರಣಾಸಿಯಲ್ಲಿ ಬ್ರಹ್ಮದತ್ತನು ರಾಜ್ಯವಾಳುತ್ತಿದ್ದಾಗ, ಬೋಧಿಸತ್ವನು ಕೃಷಿಕಕುಲದಲ್ಲಿ ಹುಟ್ಟ, ವಯಸ್ಸು ಬಂದ ಮೇಲೆ ಕೃಷಿ ಕರ್ಮದಿಂದ ಜೀವಿಸುತ್ತಿದ್ದನು.

(೩ ಇಡ “Ad “VN “yelqqnsEyexUoA “y “iq : 6531170)) (೪10 ‘SpuE[10yy9N Ul ASAINS [50130100೦31 “10 aq : 3031246072)

ಇ0 n&] (೧೦೯) ೩೩೮೫ ೧೮೧೧೩೦೦

(`೦5*11 ‘OEY 95910110 *q ug : 010) (pogce Gu ಜಲು ste ಜಣ) 20 Re] (206) &@£em ೧೭೧೫೩೦೪

ಇಪ್ಪತ್ತೆಂಟು ಕತೆ ೧ಷ್ಠಿ

ಕಾಲದಲ್ಲಿ ಒಬ್ಬ ವ್ಯಾಪಾರಿಯು ಕತ್ತೆಯ ಮೇಲೆ ಭಾರ ಹೊರಿಸಿ ವ್ಯವಹಾರ ಮಾಡುತ್ತ ತಿರುಗಾಡುತ್ತಿದ್ದನು. ಅವನು ಹೋದ ಹೋದ ಕಡೆ ಕತ್ತೆಯ ಬೆನ್ನಿನಿಂದ ವಸ್ತುಗಳನ್ನು ಇಳಿಸಿ, ಕತ್ತೆಗೆ ಸಿಂಹ ಚರ್ಮ ಹೊದಿಸಿ, ಬತ್ತ ಜವೆಗಳ ಗದ್ದೆಗೆ ಬಿಡುತ್ತಿದ್ದನು. ಗದ್ದೆಯ ಕಾವಲವರು ಅದನ್ನು ಕಂಡು ಸಿಂಹವೆಂದು ತಿಳಿದು ಹತ್ತಿರ ಬರುತ್ತಿರ ಲಿಲ್ಲ.

ಆಗ, ಒಂದು ದಿವಸ ವ್ಯಾಪಾರಿಯು ಒಂದಾನೊಂದು ಗ್ರಾಮದ ಬಾಗಿಲಲ್ಲಿ ತಂಗಿ, ಬೆಳಗಿನ ಊಟವನ್ನು ಬೇಯಿಸುತ್ತಿರು ವಾಗ ಕತ್ತೆಗೆ ಸಿಂಹ ಚರ್ಮ ಹೊದಿಸಿ ಜವೆಯ ಗದ್ದೆಗೆ ಬಿಟ್ಟನು. ಗದ್ದೆಯ ಕಾವಲಿನವರು ಅದು ಸಿಂಹವೆಂದು ತಿಳಿದು, ಹತ್ತಿರ ಹೋಗ ಲಾರದೆ ಮನೆಗೆ ಹೋಗಿ ತಿಳಿಸಿದರು. ಗ್ರಾಮದವರೆಲ್ಲರೂ ಆಯುಧ ಗಳನ್ನು ಹಿಡಿದು ಶಂಖಗಳನ್ನು ಊದುತ್ತ, ಭೇರಿಗಳನ್ನು ಬಡಿಯುತ್ತ ಗದ್ದೆಯ ಬಳಿ ಹೋಗಿ ಕೂಗಾಡಿದರು. ಕತ್ತೆ ಮರಣ ಭಯದಿಂದ ಹೆದರಿ ಕತ್ತೆಕೂಗು ಕೂಗಿತು.

ಆಗ್ಯ ಅದರ ಕತ್ತೆತನವನ್ನು ತಿಳಿದು ಬೋಧಿಸತ್ವನು

ಇದು ಸಿಂಹದ ಕೂಗಲ್ಲ, ಹುಲಿಯದಲ್ಲ, ಚಿರತೆಯದಲ್ಲ. ಸಿಂಹ

ಚರ್ಮ ಹೊದೆದ ಪಾಪಿ ಕತ್ತೆ ಕೂಗುವ ಕೂಗು'' ಎಂದು ಮೊದಲ ಗಾಹೆ ಹೇಳಿದನು.

ಗ್ರಾಮದವರು ಕೂಡ ಅದರ ಕತ್ತೆತನವನ್ನು ತಿಳಿದು, ಮೂಳೆ ಮುರಿಯ ಬಡಿದು, ಸಿಂಹೆಚರ್ಮವನ್ನು ತೆಗೆದುಕೊಂಡು ಹೋದರು. ಆಗ ವ್ಯಾಪಾರಿಯು ಬಂದು ವ್ಯಸನಗೊಂಡ ಕತ್ತೆಯನ್ನು ಕಂಡು

4 ಕತ್ತೆಯು ಸಿಂಹಚರ್ಮವನ್ನು ಹೊದೆದು ಹಸುರು ಜವೆಯನ್ನು ಚಿರ ಕಾಲ ತಿನ್ನಬಹುದಾಗಿತ್ತು. ಆದರೆ ಕೂಗಿ ಕೆಟ್ಟಿತು. '' ಎಂದು ಎರಡನೆಯ ಗಾಹೆ ಹೇಳಿದನು. ಅವನು ಹೀಗೆ ಹೇಳುತ್ತಿರು ವಾಗಲೇ ಕತ್ತೆ ಅಲ್ಲಿಯೇ ಸತ್ತುಬಿದ್ದಿತು. ವ್ಯಾಪಾರಿಯು ಅದನ್ನು ಬಿಟ್ಟು ಹೊರಟು ಹೋದನು.

2

೧೪ ಬುದ್ಧನೆ ಕತೆಗಳು

ಗಾಂಗೇಯ ಜಾತಕ (೨೦೫)

ಹಿಂದೆ, ವಾರಣಾಸಿಯಲ್ಲಿ ಬ್ರಹ್ಮದತ್ತನು ರಾಜ್ಯವಾಳುತ್ತಿದ್ದಾಗ, ಬೊಧಿಸತ್ವನು ಗಂಗಾತೀರದಲ್ಲಿ ವೃಕ್ಷದೇವತೆಯಾಗಿದ್ದ ನು.

ಆಗ ಗಂಗೆ ಯಮುನೆಗಳ ಸಂಗಮಸ್ಥಾ ನದಲ್ಲಿ ಗಾಂಗೇಯ ಮತ್ತು ಯಾಮುನೇಯ ಎಂಬ ಎರಡು ಮಿಸಾನುಗಳು ನಾನು ಚೆನ್ನಾಗಿದ್ದೇನೆ, ನೀನು ಚೆನ್ನಾಗಿದ್ದೀಯೆ ಎಂದು ತಮ್ಮ ತಮ್ಮ ರೂಪವನ್ನು ಕುರಿತು ನಿನಾದಮಾಡುತ್ತ, ಕೊಂಚ ದೂರದಲ್ಲಿ ಗುಗೆಯ ದಡದಲ್ಲಿ ಆಮೆ ಮಲಗಿ ರುವುದನ್ನು ಕುಡು, “ನಾನು ಚಿನ್ನುಗಿರುವುದೂ ಚೆನ್ನಾ ಗಿಲ್ಲದಿರುವುದೂ ಇದಕ್ಕೆ ಗೊತ್ತು” ಎಂದು ಅದರ ಬಳಿ ಹೋಗಿ, ಏನಯ್ಯ, ಆಮೆ? ಗಾಂಗೇಯನು ಚಿನ್ನಾಗಿರುವನೆ, ಅಥವಾ ಯಾಮುನೇಯನೆ? ಎಂದು ಕೇಳದನವು.

ಆಮೆಯು ಗಾಂಗೇಯನೂ ಚೆನ್ನಾಗಿದ್ದಾನೆ. ಯಾಮುನೇಯನೂ ಚೆನ್ನಾಗಿದ್ದಾನೆ. ಆದರೆ ನಿಮ್ಮಿಬ್ಬರಿಗಿಂತ ನಾನೇ ಅತಿ ಹೆಜ್ಜಾಗಿ ಚೆನ್ನಾಗಿ ದ್ದೇನೆ » ಎಂದು ಅರ್ಥವನ್ನು ಬೆಳಗಲು

“ಗಂಗೆಯ ಮಾನುಗಳು ಚೆನ್ನಾಗಿನೆ. ಯಮುುನೆಯವೂ ಚೆನ್ನಾಗಿವೆ. ಆದರೆ ನಾಲ್ಕು ಕಾಲಿನ ಇವನು, ಹರಡಿದ ನ್ಯಗ್ರೋಧಮಂಡಲದಂತವನು, ಕೋಲಿ ನಂತಹ ಉದ್ದ ಕತ್ತಿನವನು, ಎಲ್ಲರಿಗಿಂತ ಹೆಚ್ಚು ಚೆನ್ನಾಗಿದ್ದಾನೆ ಎಂದು ಮೊದಲ ಗಾಹೆ ಹೇಳಿತು.

ವಿತಾನುಗಳು ಮಾತು ಕೇಳಿ "ಎಲಾ ಪಾಪಿ ಆಮೆ! ನಾವು ಕೇಳಿದುದಕ್ಕೆ ಹೇಳದೆ ಬೇರೇನೋ ಹೇಳುವೆ! ಎಂದು ಹೇಳಿ

« ಕೇಳಿದುದಕ್ಕೆ ಹೇಳಲಿಲ್ಲ. ಕೇಳಿದರೆ ಬೇರೆ ಹೇಳುತ್ತದೆ. ತನ್ನನ್ನು ಹೊಗಳಿಕೊಳ್ಳುವ ಇದು ನಮಗೆ ಸರಿಬರುವುದಿಲ್ಲ” ಎಂದು ಎರಡನೆಯ ಗಾಹೆ ಹೇಳಿದುವು.

ಇಪ್ಪತ್ತೆಂಟು ಫತೆ ೧೫ ಕುರಂಗಮೃಗ ಜಾತಕ (೨೦೬)

ಒಂದೆ, ವಾರಣಾಸಿಯಲ್ಲಿ ಬ್ರ ಹ್ಮ ದತ್ತನು ರಾಜ್ಯವಾಳುತ್ತಿ ದ್ದಾ ಗ್ಯ ಬೋಧಿಸ ತ್ರನು ಕುರಂಗಮೃ ಗವಾಗಿ ಾಡಿನಲಿ ಒಂದು ಕಾಕ ಬಳಿಯ ಪೊದೆಯಲ್ಲಿ, ವಾಸವಾಗಿದ್ದನು. ಅದೇ ಕೊಳದ ಬಳಿ ಒಂದು ಮರದ ತುದಿಯಲ್ಲಿ ಶತಸಪತ್ರನೆಂಬ ಕುಕ್ಕಿ ಕುಳಿತಿತ್ತು. ಕೊಳದಲ್ಲಿ ಒಂದು ಆಮೆ ವಾಸವಾಗಿತ್ತು. ಹೀಗೆ « ಮೂರೂ ಸಂಗಡಿಗರಾಗಿ ಒಂದಕೊಡ ನೊಂದು ಪ್ರಿಯನಾಗಿ ಕೂಡಿ ವಾಸಿಸುತ್ತಿದ್ದ ವು.

ಆಗ ಜಿಂಕೆಗಳನ್ನು ಹಿಡಿಯುವ ಬೆ*ಡನೊಬ್ಬನು ಕಾಡಿನಲ್ಲಿ ತಿರುಗುತ್ತ, ನೀರಿಗೆ ಇಳಿಯುವ ಕಡೆ ಬೆೋಧಿಸತ್ತನ ಹೆಜ್ಜೆಗುರುತನ್ನು ಕಂಡು ಲೋಹದ ಸಂಕೋಲೆಗೆ ಸಮನಾದ ಚಕ್ಕಳದ ಪಾಶವನ್ನು ಒಡ್ಡಿ ಹೊ”ದನು. ಬೋಧಿಸತ್ತನು ನೀರು ಕುಡಿಯಲು ಬಂದು, ಮೊದಲ ಜಾವದಲ್ಲಿಯೇ ಪಾಶಕ್ಕೆ ಸಿಕ್ಕಿ ಸಿಕ್ಕಿ ಬಿದ್ದ ಕೂಗನ್ನು ಕೂಗಿದನು. ಶಬ್ದವನ್ನು ಕೇಳಿ 08 ತತನತ ವೂ ನೀರಿನಿಂದ ಆಮೆಯೂ ಒಂದು,

9, ಏನು ಕುದೆಂದು ಮಂತ್ರಾಲೋಜಚನೆ ಮಾಡಿದನು.

ಆಗ ಶತಪತ್ರನ್ರು ಆಮೆಯನ್ನು ಕರಿಗ್ರಾ ಅಯ್ಯ, ನಿನಗೆ ಹಲ್ಲು ಗಳಿವೆ. ಪಾಶವನ್ನು ಕತ್ತರಿಸು. ನಾನು ಹೋಗಿ ಅವನು ಬಾರದಂತೆ ಮಾಡುವೆನು ಬಗೆ ನಮ್ಮಿಬ್ಬರ ಪರಾಕ್ರಮದಿಂದ ಗೆಳೆಯನ ಜೀವ ಉಳಿಯುವುದು? ಎಂದು ಅರ್ಥವನ್ನು ಬೆಳಗಲು ಮೊದಲ ಗಾಹೆ ಹೇಳಿತು:

ಬಾ, ಅಮೆ. ಚಕ್ಕಳದ ಪಾಶವನ್ನು ಹಲ್ಲಿಂದ ಕತ್ತರಿಸು. ಬೇಡನು ಬರದೆ ನಿಲ್ಲುವಂತೆ ನಾನು ಮಾಡುತ್ತೇನೆ.”

ಆಮೆಯು ಚರ್ಮದ ಹೆಗ್ಗವನ್ನು ಕಡಿಯತೊಡಗಿತು. ಶಕಪತ್ರವು ಬೇಡನ ವಾಸದ ಹಳ್ಳಿ ಗೆ ಹೋಯಿತು.

ಬೇಡನು ಬೆಳಗಿನ ಚಾವದಲ್ಲಿಯೇ ಶಕ್ತಾ 5 ಯುಧವನ್ನು ಹಿಡಿದು ಹೊರಹೊರಟನು. ಹೆಕ್ಕಿಯು ಅನನ ಹೊರಡುವಿಕೆಯನ್ನು: ತಿಳಿದು

೧೬ ಬುದ್ಧ ಕತೆಗಳು

ಕಿರಿಚಿಕೊಂಡು ರೆಕ್ಕೆ ಬಡಿದು ಅವನು ಮುಂಬಾಗಿಲಿಫಿಂದ ಹೊರಡುವಾಗ ಮುಖದ ಮೇಲೆ ಹೊಡೆಯಿತು. ಬೇಡನು. "4 ಅನಿಷ್ಟದ ಹಕ್ಕಿ ನನ್ನನ್ನು ಹೊಡೆಯಿತು”? ಎಂದು ಹಿಂದಿರುಗಿ, ಕೊಂಚ ಮಲಗಿ, ವ. ಶಕ್ತಿಯನ್ನು ಹಿಡಿದು ಎದ್ದನು. ಹಕ್ಕಿಯು " ಇವನು ಮೊದಲು ಮುಂಬಾಗಿಲಿನಿಂದ ಹೊರಟನು. ಈಗ ಹಿಂಬಾಗಿಲಿನಿಂದ ಹೊರಡುವನು” ಎಂದು ತಿಳಿದು, ಹೋಗಿ ಮನೆಯ ಹಿಂದೆ ಕುಳಿತಿತು. ಬೇಡನು ಕೂಡ ಮುಂಬಾಗಿಲಿನಿಂದ ಹೊರಟು, ನಾನು ಅನಿಷ್ಟದ ಹಕ್ಕಿಯನ್ನು ಕಂಡೆ. ಈಗ ಹಿಂಬಾಗಿಲಿನಿಂದ ಹೋಗುವೆನು” ಎಂದು ಹಿಂಬಾಗಿಲಿನಿಂದ ಹೊರಟನು. ಹಕ್ತಿ ಪುನಃ ಕಿರಿಚಿಕೊಂಡ್ಕು ಹೋಗಿ ಅವನ ಮುಖದ ಮೇಲೆ ಹೊಡೆಯಿತು. ಬೇಡನು ಪುನಃ ಅದರಿಂದ ಏಟು ಕಿಂದು, ಅದು ತನ್ನನ್ನು ಹೋಗಗೊಡದೆಂದು ತಿಳಿದು ಹಿಂದಿರುಗಿ ಬಂದು, ಅರುಣನು ಬರುವವರೆಗೂ ಮಲಗಿ, ಅರುಣೋದಯದಲ್ಲಿ ಶಕ್ತಿ ಹಿಡಿದು ಹೊರಟನು.

ಆಗ ಹಕ್ಕಿಯು ಬೇಗ ಹೋಗಿ ಬೇಡನು ಬಂದುಬಿಡುವನೆಂದು ಬೋಧಿಸತ್ತನಿಗೆ ಹೇಳಿತು. ವೇಳೆಗೆ ಒಂದು ಎಳೆ ಹೊರತು ಉಳಿದ ಹೆಗ್ಗವನ್ನು ಆಮೆ ಕಚ್ಚಿತ್ತು. ಅದರ ಹೆಲ್ಲುಗಳು ಬಿದ್ದು ಹೋಗುವ ಹಾಗಾಗಿತ್ತು, ಬಾಯಿ ರಕ್ತಮಯವನಾಗಿತ್ತು. ಬೇಡನು ಶಕ್ತಿಹಿಡಿದು ಮಿಂಚೆನ ವೇಗದಿಂದ ಬರುವುದನ್ನು ಬೋಧಿಸತ್ವನು ಕಂಡು ಎಳೆಯನ್ನು ಕಿತ್ತು ವನವನ್ನು ಹೊಕ್ಕನು. ಹಕ್ಕಿ ಮರದ ಮೇಲೆ ಕುಳಿತಿತು. ಆಮೆ ಬಲವಿಲ್ಲದೆ ಅಲ್ಲಿಯೆ ಮಲಗಿತು. ಬೇಡನು ಆಮೆ ಯನ್ನು ಹಸುಬೆಯೆಲ್ಲಿ ಎಸೆದು ಒಂದು ಮರದ ಬುಡಕ್ಕೆ ಸಿಕ್ಕಿಸಿದನು.

ಬೋಧಿಸತ್ವನು ಹಿಂದಿರುಗಿ ನೋಡಿ, ಬೇಡನು ಆಮೆಯನ್ನು ಹಿಡಿದುದು ಕಂಡು “ನನ್ನ ಸಂಗಡಿಗನಿಗೆ ಜೀವದಾನಮಾಡುತ್ತೇನೆ” ನೆಂದು, ದುರ್ಬಲನಂತಾಗಿ ಬೇಡನ ಕಣ್ಣಿಗೆಬಿದ್ದಿತು. ಅವನು “ಇದು ದುರ್ಬಲವಾಗಿದೆ. ಇದನ್ನು ಸಾಯಿಸುವೆನು” ಎಂದು ಶಕ್ತಿಯನ್ನು ಕೊಂಡು ಅದನ್ನು ಹಿಂಬಾಲಿಸಿದನು. ಬೋಧಿಸತ್ವನು ಅವನಿಗೆ ಬಹು

ದೂರವಾಗದೆ, ಬಹು ಹತ್ತಿರವೂ ಆಗದೆ ನಡೆದು, ಅವನನ್ನೂ ಕೊಂಡು

ಇಪ್ಪತ್ತೆಂಟು ಕತೆ ೧೭

ಕಾಡನ್ನು ಹೊಕ್ಕನು. ದೊರ ಬಂದಿರುವುದನ್ನು ತಿಳಿದ್ದು ದಾರಿತಪ್ಪಿಸಿ, ಬೇಕೆ ಮಾರ್ಗದಲ್ಲಿ ಗಾಳಿಯವೇಗದಿಂದ ಹೋಗಿ, ಕೊಂಬಿನಿಂದ ಹೆಸುಬೆ ಯನ್ನು ಎತ್ತಿ ಬಿಸುಟು, ನೆಲದಲ್ಲಿ ಬೀಳಿಸಿ, ಹೆರಿದು ಆಮೆಯನ್ನು ಹೊರಗೆ ಬಿಟ್ಟನು. ಶತಪತ್ರವೂ ಮರದಿಂದ ಕೆಳಗಿಳಿಯಿತು.

ಬೋಧಿಸತ್ವನು ಎರಡಕ್ಕೂ ಬುದ್ಧಿವಾದ ಕೊಡುತ್ತ “ನಾನು ನಿಮ್ಮನ್ನು ಆಶ್ರಯಿಸಿ ಬದುಕಿದೆ. ನೀವು ನನಗೆ ಗೆಳೆಯರ ಕರ್ತವ್ಯ ವನ್ನು ಮಾಡಿದಿರಿ. ಈಗ ಬೆಡನು ಬಂದು ನಿಮ್ಮನ್ನು ಹಡಿದಾನು. ಆದ್ದರಿಂದ, ಅಯ್ಯಾ ಶತಸತ್ರ, ನೀನು ನಿನ್ನ ಮಕ್ಕಳನ್ನು ಕೊಂಡು ಬೇರೆ ಕಡೆಗೆ ಹೋಗು. ನಿನು ಅಯ್ಯಾ ಆಮೆ, ನೀರಿನೊಳಗೆ ಹೋಗು” ಎಂದನು. ಅನು ಹಾಗೆಯೇ ಮಾಡಿದವು.

ಗುರು ಅಭಿಸಂಬುದ್ಧನಾಗಿ ಎರಡನೆಯ ಗಾಹೆ ಹೇಳಿದನು: "ಆಮೆ ನೀರನ್ನು ಹೊಕ್ಕಿತು. ಕುರಂಗವು ಕಾಡನ್ನು ಪ್ರವೇಶಿಸಿತು. ಶತಪತ್ರವು ಮುರದ ತುದಿಯಿಂದ ದೂರವಾಗಿ ಮಕ್ಕಳನ್ನು ಒಯ್ದಿತು' ಎಂದು.

ಬೇಡನು ಸ್ಥಳಕ್ಕೆ ಬಂದು, ಏನನ್ನೂ ಕಾಣದೆ, ಹರಿದ ಹಸುಬೆ ಯನ್ನು ಹಿಡಿದು ಖಿನ್ನನಾಗಿ ಮನೆಗೆ ಹೋದನು. ಮೂವರು ಸಂಗಡಿ ಗರು ಜೀನನಿರುವನರೆಗೂ ವಿಶ್ವಾಸವನ್ನು ಮುರಿಯದೆ, ಅನಂತರ ತಮ್ಮ ಕರ್ಮಕ್ಕೆ ಅನುಸಾರವಾಗಿ ಹೋದರು.

ಶಿಂಶುಮಾರ ಜಾತೆಕೆ (೨೦೮)

ಹಿಂದೆ, ವಾರಣಾಸಿಯಲ್ಲಿ ಬ್ರಹ್ಮದತ್ತನು ರಾಜ್ಯವಾಳುತ್ತಿದ್ದಾಗ, ಬೋಧಿಸತ್ತನು ಹಿಮವಂತಪ್ರದೇಶದಲ್ಲಿ ಕಹಿಯಾಗಿ ಹುಟ್ಟಿದ್ದ ನು. ಅವನಿಗೆ ಆನೆಯ ಬಲನಿತ್ತು. ಕಷ್ಟಸಹಿಷ್ಣುವಾಗಿ, ಮಹಾಶರೀರನಾಗಿ, ಸೌಭಾಗ್ಯವಂತನಾಗಿ ಆತನು ಗಂಗೆಯು ತಿರುಗುವ ಕಡೆಯ ಕಾಡಿನಲ್ಲಿ

ನಾಸಮಾಡುತ್ತಿದ್ದನು.

೧೮೪ ಬುದ್ಧನ ಕತೆಗಳು

ಆಗ್ಕ ಗಂಗೆಯಲ್ಲಿ ಒಂದು ಮೊಸಳೆ ವಾಸವಾಗಿತ್ತು. ಅದರ ಹೆಂಡತಿ ಬೋಧಿಸತ್ವನ ಶರೀರವನ್ನು ಕಂಡು ಅದರ ಹೈದಯಮಾಂಸ ವನ್ನು ಬಹಿ," ಸ್ವಾಮಿ, ನಾನು ಕಪಿರಾಜನ ಹೈದಯಮಾಂಸ ವನ್ನು ತಿನ್ನಬಯಸುನೆನು” ಎಂದು ಮೊಸಳಗೆ ಹೇಳಿತು. ಭದ್ರೈ ನಾನು ಜಲದಲ್ಲಿರುವನನು, ಅದು ನೆಲದಲ್ಲಿರುವದು ಅದನ್ನು ನಾನು ಹೇಗೆ ಹಿಡಿಯಲಾದೀತು?” ಎಂದಿತು ಮೊಸಳೆ. "ಏನಾದರೂ ಉಪಾಯ ದಿಂದ ಹಿಡಿ. ಅದು ಸಿಕ್ಕದಿದ್ದರೆ ನಾನು ಸಾಯುವೆನು.” ಹಾಗಾದರೆ, ಹೆದರಬೇಡ. ಒಂದು ಉಸಾಯವುಂಟು. ಅದರ ಹೃದಯಮಾಂಸ ವನ್ನು ನಿನಗೆ ತಿನ್ನಿಸುವೆನು ಎಂದು ಹೆಣ್ಣು ಮೊಸಳೆಯನ್ನು ಸಮಾಧಾನ ಪಡಿಸಿ, ಬೋಧಿಸತ್ತನು ಗಂಗೆಯಲ್ಲಿ ನೀರು ಕುಡಿಯುತ್ತ ಕುಳಿತ ಕಾಲ ದಲ್ಲಿ ಅದರ ಹತ್ತಿರ ಹೋಗಿ, “ವಾನರೇಂದ್ರ, ಪ್ರದೇಶದಲ್ಲಿ ಕಸು ಗಾಯಿಗಳನ್ನು ತಿನ್ನುತ್ತ ಕಿರುಗಿದ ಸ್ಪಳದಲ್ಲಿಯೇ ಏಕೆ ತಿರುಗುವೆ? ಗಂಗೆಯ ಆಚೆ ಕಡೆ ಮಾವು ಲಬುಜ ಮೊದಲಾದ ಮಧುರಫಲಗಳಿಗೆ ಕೊನೆಯಿಲ್ಲ. ಅಲ್ಲಿಗೇಕೆ ಹೋಗಿ ಫಲಾಫಲಗಳನ್ನು ತಿನ್ನಲು ತೊಡಗ ವೊಲ್ಲೆ ?” ಎಂದಿತು.

ಕುಂಭೀಲರಾಜಾ, ಗಂಗೆಯಲ್ಲಿ ಮಹಾನೀರು. ವಿಸ್ತೀರ್ಣ ಹೆಚ್ಚು. ಹೇಗೆ ಅಲ್ಲಿ ಹೋಗಲಾದೀತು?”

_ “ಹೋಗುವುದಾದಕೆ, ನಾನು ನಿನ್ನನ್ನು ನನ್ನ ಬೆನ್ನ ಮೇಲೇರಿಸಿ ಕೊಂಡು ಒಯ್ಯುವೆನು.” ಅದು ಅದರ ಮಾತನ್ನು ನಂಬಿ ಒಳ್ಳೆಯದೆಂದು ಒಪ್ಪಲು ಹಾಗಾದರೆ ಬಾ. ನನ್ನ ಬೆನ್ನ ಮೇಲೇರು” ಎಂದು ಮೊಸಳೆ ಯೆಂದಿತು. ಕಪಿ ಅದರ ಬೆನ್ನ ಮೇಲೇರಿತು. ಮೊಸಳೆ ಕೊಂಚ ದೂರ ಒಯ್ದು ಅದನ್ನು ನೀರಿನಲ್ಲಿ ಮುಳುಗಿಸಿತು.

ಬೋಧಿಸತ್ವನು “ಅಯ್ಯ, ನೀರಿನಲ್ಲಿ ನನ್ನನ್ನು ಮುಳುಗಿಸುವೆ. ಇದೇಕೆ?” ಎಂದನು.

ಇಸ್ಪತ್ತೆಂಟು ಕತೆ ೧೯

“ನಾನು ನಿನ್ನ ನ್ನು ಧರ್ಮದಿಂದ ಧರ್ಮಕ್ಕಾಗಿ ಕೊಂಡುಹೋಗು ತ್ತಿಲ್ಲ. ನನ್ನ ಹೆಂಡತಿಗೆ ನಿನ್ನ ಹೈದಯಮಾಂಸ ಸದ ಮೇಲೆ ಬಯಕೆ ಯೆದ್ದಿದೆ. pa ಅವಳಿಗೆ "ನನ್ನ ಹೃದಯವನ್ನು ತಕಿನಿಸಬಯಸು ವೆನು.”

“ಅಯ್ಯಾ ಹೇಳಿದುದು ಚೆನ್ನಾ ಗಿ ಹೇಳಿದೆ. ನಮ್ಮ ಹೃದಯಗಳು ಒಳೆಗಿದ್ದಕೆ ಕೊಂಬೆಯ ತುದಿಗಳಲ್ಲಿ ತಿರುಗುವಾಗ ಅವು ಚೂರು ಚೂರಾದಾನು.”

ಹಾಗಾದರೆ, ಅವುಗಳನ್ನು ಎಲ್ಲಿ ಇಡುನಿರಿ?”

ಬೋಧಿಸತ್ತನು, ಕೊಂಚ ದೂರದಲ್ಲಿ ಒಂದು ಅತ್ತಿಯ ಗಿಡದ ಸಕ್ತವಾದ ಹೆಣ್ಣುಗಳ ಗೊಂಚಲನ್ನು ಕಾಣಿಸಿ ನೋಡು, ನನ್ಮು ಹೈದಯಗಳು ಅತ್ತಿಯ ಮರದಲ್ಲಿ ನೇತಾಡುತ್ತಿವೆ” ಎಂದನು.

"ನೀನು ನನಗೆ ನಿನ್ನ ಹೈದಯ ಕೊಟ್ಟರೆ ನಾನು ನಿನ್ನನ್ನು ಕೊಲ್ಲುವುದಿಲ್ಲ.”

ಹಾಗಾದರೆ ನನ್ನನ್ನು ಅಲ್ಲಿಗೆ ಒಯ್ಯಿ. ನಿನಗೆ ವೃಕ್ಷದಲ್ಲಿ ಜೋಲಾಡುತಿ ಕ್ರಿ ರುವುದನ್ನು ಕೊಡುವೆನು.”

ಮೊಸಳೆ ಅದನ್ನು ಅಲ್ಲಿಗೆ ಕೊಂಡುಹೋಯಿತು. ಬೋಧಿಸತ್ವನು ಅದರ ಬೆನ್ನಿನಿಂದ ಹಾರಿ ಅತ್ತಿಯಮರದಲ್ಲಿ ಕುಳಿತು, “ಅಯ್ಯಾ, ಚ್ಚು ಮೊಸಳೆ, ಪ್ರಾಣಿಗಳ ಹೃದಯಗಳು ಮರದ ತುದಿಯಲ್ಲಿ i, ಕಿಳಿದೆಯಲ್ಲ! ನೀನು ಅಜ್ಜಾ ನಿ ನಾನು ನಿನಗೆ ಮೋಸಮಾಡಿದೆ. ನಿನ್ನ ಫಲಾಫಲಗಳು ಅಲ್ಲಿಯೇ ಇರಲಿ. ನಿನ್ನ ಶರೀರ ದೊಡ್ಡದೇ ಹೊರತು, ಪ್ರಜ್ಞೆ ನಿನಗಿಲ್ಲ” ಎಂದು ಹೇಳಿ ಅರ್ಥವನ್ನು ಬೆಳಗುತ್ತ ಗಾಹೆ ಗಳನ್ನು ಹೇಳಿದನು:

“ನೀರಿನ ಆಚೆ ಇರುನ ಮಾವು ನೇರಿಳೆ ಹಲಸುಗಳು- ಸಾಕು. ನನಗೆ ಅತ್ತಿಯಹಣ್ಣೇ ಮೇಲು. ನಿನ್ನಮ್ಮ ದೊಡ್ಡದು; ಪ್ರಜ್ಞೆ ಅದಕ್ಕೆ ತಕ್ಕಂತಿಲ್ಲ. ನೋಸ ಹೋದಡೆ, ನೊಸಳೆ, ಸುಖನಿರುನ ಕಡೆಗೆ ಹೋಗು.”

೨೦ ಬುದ್ಧನ ಕತೆಗಳು

ಮೊಸಳೆಯು ಸಾವಿರ ಹೆಣವನ್ನು ಕಳೆದುಕೊಂಡಂತೆ ದುಂಃಖಿಸುತ್ತ ಮನಸ್ಸು ಕೆಟ್ಟು ಗೋಳಾಡುತ್ತ ತನ್ನ ಮನೆಗೆ ಹೋಯಿತು.

ಕರ್ಕರ ಜಾತಕ (೨೦೯)

ಹಿಂದೆ, ವಾರಣಾಸಿಯಲ್ಲಿ ಬ್ರಹ್ಮೆದತ್ತನು ರಾಜ್ಯವಾಳುತ್ತಿರುವಾಗ ಬೋಧಿಸತ್ವನು ಒಂದು ದಟ್ಟಿಡನಿಯಲ್ಲಿ ವೃಕ್ಷದೇವತೆಯಾಗಿದ್ದನು.

ಆಗ ಒಬ್ಬ ಹಕ್ಕಿ ಬೇಡನು ಒಂದು ದೀವದ ಹಕ್ಕಿಯನ್ನು ತಂದು, ಕೂದಲಿನಿಂದ ಮಾಡಿದ ಹೆಗ್ಗವನ್ನೂ ಕೋಲುಗಳನ್ನೂ ಹಿಡಿದು ಕಾಡಿನಲ್ಲಿ ಕಾಡು ಕೋಳಿಯನ್ನು ಹಿಡಿಯಲು ಹೋದನು. ಆಗ ಒಂದು ಮುದಿ ಕೋಳಿ ಓಡಿಹೋಗಿ ಕಾಡನ್ನು ಹೊಕ್ಕಿತು. ಅದು ಅವನ ಕೂದಲಿನ ಪಾಶಕ್ಕೆ ಸಿಗವೊಲ್ಲದೆ, ಕುಶಲತೆಯಿಂದ ತಪ್ಪಿಸಿಕೊಂಡು, ಎದ್ದು ಎದ್ದು ಕೂರುತ್ತಿತ್ತು. ಬೇಡನು ಚಿಗುರು ತುಂಬಿದ ಕೊಂಬೆಗಳಿಂದ ತನ್ನನ್ನು ಮುಚ್ಚಿಕೊಂಡು, ಪುನಃ ಪುನಃ ಕೋಲನ್ನೂ ಪಾಶವನ್ನೂ ಒಡ್ಡಿದನು. ಕೋಳಿಯು ಅವನನ್ನು ಲಜ್ಜೆಗೊಳಿಸಬಯಸಿ, ಮನುಷ್ಯರಂತೆ ಮಾತ ನಾಡುತ್ತ

“ಅಶ್ವಕರ್ಣ, ನಿಭೀತಕ ಮುಂತಾದ ವೃಕ್ಷಗಳನ್ನು ಕಾಡಿನಲ್ಲಿ ಕಂಡಿದ್ದೇನೆ. ಆದರೆ, ಮರವೆ, ನೀನು ನಡೆಯುವಂತೆ ಅವು ನಡೆಯಲಾರವು? ಎಂದು ಮೊದಲ ಗಾಹೆ ಹೇಳಿತು.

ಹೀಗೆಂದು, ಪುನಃ ಕೋಳಿಯು ಬೇರೆ ಕಡೆ ಓಡಿಹೋಯಿತು. ಅದು ಓಡಿಹೋಗುವಾಗ, ಬೇಡನು

4 ಹಳೆಯ ಕೋಳಿ ಪಂಜರವನ್ನು ಮುರಿದು ಬಂದದ್ದು. ಕುಶಲಿ ಯಾಗಿ ಕೂದಲಿನ ಪಾಶದಿಂದ ತಪ್ಪಿಸಿಕೊಂಡು ಮಾತನಾಡುವುದು? ಎಂದು ಎರಡನೆಯ ಗಾಹೆ ಹೇಳಿದನು. ಹೀಗೆಂದು, ಬೇಡನು ಕಾಡಿನಲ್ಲಿ ತಿರುಗಿ, ಸಿಕ್ಕಿದಷ್ಟನ್ನು ಕೊಂಡು ಮನೆಗೆ ಹೋದನು.

ಇಪ್ಪತ್ತೆಂಟು ಕತೆ ೨೧ ಕಂದಗಲಕ ಜಾತಕ (೨೧೦)

ಹಿಂದೆ, ವಾರಣಾಸಿಯಲ್ಲಿ ಬ್ರಹ್ಮದತ್ತನು ರಾಜ್ಯವಾಳುತ್ತಿದ್ದಾಗ ಬೋಧಿಸತ್ವನು ಹಿಮವಂತಪ್ರ ದೇ ಶದಲ್ಲಿ ಮರಕುಟಕ ಹಕ್ಕಿಯಾಗಿ ಹುಟ್ಟಿ, ಜಿಷಿ ಬದಿರವನದಲ್ಲಿಯೇ. ಆಹಾರ. ಹಿಡಿಯುತಿ ದ್ದು ದರಿಂದ ಚತ ಖದಿರವನಿಕನೆಂದು ಹೆಸರಾಯಿತು. ಅವನಿಗೆ ಕಂದಗಲಕನೆಂಬ ಹೆಕ್ಕಿ ಸಂಗಡಿಗನಾಯಿತು. ಹಕ್ಕಿ ಹಣ್ಣು ತುಂಬಿದ ವನದಲ್ಲಿ ಆಹಾರ ಕೊಳ್ಳುತ್ತಿತ್ತು. ಅದು ಒಂದು ದಿನ ಖದಿರನನಿಕನ ಬಳಿ ಹೋಯಿತು.

ಖದಿರವನಿಕನು ಸಂಗಡಿಗನು ಬಂದನೆಂದು ಕಂದಗಲಕನನ್ನು ಕೊಂಡು ಖದಿರವನವನ್ನು ಹೊಕ್ಕು ಖದಿರಮರಗಳ ಮೈಯನ್ನು ಕೊಳ್ಳಿ ನಿಂದ ಹೊಡೆದು ೬. 11 ಸಣ್ಣು ಪ್ರಾಣಿಗಳನ್ನು ಹೊರಗೆಳೆದು ಕಂದ ಗಲಕನಿಗೆ ಕೊಟ್ಟ ನು. ಕೊಟ್ಟುಕೊಟ್ಟ ತೆ ಕಂದಗಲಕನು ಅವನ್ನು ಸಿಹಿ ಯಾದ ಕಜ್ಜಾ ರಟ ಮುರಿದು ತಿಂದಿತು. ಹಾಗೆ ತಿನ್ನುತ್ತ ಇದು ಮರಕುಟಕನಾಗಿ ಹುಟ್ಟಿ ದರೆ ನಾನೂ ಹಾಗೆಯೆ. ಕೊಡುವ ಆಹಾರ ನನಗೇಕೆ) ಖದಿರನನದಲ್ಲಿ ಆಹಾರ ಕೊಳ್ಳು ವೆನು” ಎಂದು ಅದಕ್ಕೆ ಅಭಿಮಾನ ಹುಟ್ಟತು. ಆಗ ಅದು : ಅಯ್ಯಾ, ನಿನಗೆ ಕಸ್ಟ ಬೇಡ ಖನಿರವನದಲ್ಲಿ ನಾನೇ ಆಹಾರ ಕೊಳ್ಳುವೆನು” ಎಂದು ಖದಿರವನಿಕನಿಗೆಂದಿತು. ಆಗ ಅಯ್ಯಾ, ನೀನು ಸಂಬಲಿ ಸರಿಭದ್ರಕ ಮೊದಲಾದ ನಿಸ್ಸಾರವಾದ ಮರಗಳ ನದಲ್ಲಿ ಆಹಾರ ಬಡಿಯುವ ಕುಲದಲ್ಲಿ ಹುಟ್ಟ ದವನು. ಆದರೆ ಖದಿರವೆಂಬುದು ಸಾರವತ್ತಾದುದು, ಗಟ್ಟ ಯಾದುದೂ? ಎಂದು ಹೇಳಿ, " ಹಾಗೆ ಮಾಡಬೇಡ?ವೆಂದರೂ «ಏನ್ನು, ನಾನೂ ಮರಕುಟಕನ ಹೊಟ್ಟಿ ಯಲ್ಲಿ' ಹುಟ್ಟ ಲ್ಲವೆ?” ಎಂದು ಅದರ ಮಾತನ್ನು ಕೇಳದೆ ವೇಗದಿಂದ ಹೋಗಿ ಖದಿರವ. ವನ್ನು ಕೊಕ್ಕಿನಿಂದ ಹೊಡೆಯಿತು. ಆಗಲೇ ಅದರ ಕೊಕ್ಕು ಮುರಿಯಿತು. ಕಣ್ಣುಗಳು ಹೊರಹೊರಟು ಬೀಳುವಂತಾದವು. ತಲೆ ಒಡೆಯಿತು. ಅದು ಮರದಲ್ಲಿ ನಿಲ್ಲಲಾರದೆ, ನೆಲದಲ್ಲಿ ಬಿದ್ದು,

೨೨ ಬುದ್ಧನ ಕತೆಗಳು

4 ಮರೆದ ಎಲೆ ತಣ್ಣಗಿದೆ. ಇದರಲ್ಲಿ ಮುಳ್ಳಿದೆ. ಒಂದೇ ಏಟಿಗೆ ನನ್ನ ತಲೆ ಕೊಕ್ಕುಗಳನ್ನು ಮುರಿದ ಇದರ ಹೆಸರೇನು?” ಎಂದು ಮೊದಲ ಗಾಹೆ ಹೇಳಿತು. ಅದನ್ನು ಕೇಳಿ ಖದಿರವನಿಕನು

ಇದು ಸಾರನಿಲ್ಲದ ವೃಕ್ಷಗಳನ್ನು ಮುರಿಯುತ್ತ ತಿರುಗುತ್ತಿತ್ತು. ಆದರೆ, ಸಾರವತ್ತಾದ ಖದಿರವನ್ನು ಸಖಾಸಿಸಿದಾಗ, ಅಲ್ಲಿ ದೊಡ್ಡ ಹಕ್ಕಿಯ ತಲೆ ಯೊಡೆಯಿತು? ಎಂದು ಎರಡನೆಯ ಗಾಹೆ ಹೇಳಿ, “ಭೋ ಕಂದಗಲಕ, ನಿನ್ನ ತಲೆ ಎಲ್ಲಿ ಒಡೆಯಿತೋ ಅದೇ ಖದಿರವೆಂಬ ಸಾರವತ್ತಾದ ವೃಕ್ಚ ಎಂದನು. ಕಂದಗಲಕನು ಅಲ್ಲಿಯೇ ಪ್ರಾಣ ಬಿಟ್ಟಿ ತು.

ಕಚ್ಛಪಜಾತಕ (೨೧೫)

ಹಿಂದೆ, ವಾರಣಾಸಿಯಲ್ಲಿ ಬ್ರಹ್ಮದತ್ತನು ರಾಜ್ಯನಾಳುತ್ತಿದ್ದಾಗ, ಬೋಧಿಸತ್ವನು ಅಮಾತ್ಯಕುಲದಲ್ಲಿ ಹುಟ್ಟಿ, ವಯಸ್ಸು ಬಂದಮೇಲೆ ಅವನಿಗೆ ಅರ್ಥ ಧರ್ಮಗಳನ್ನು ಅನುಶಾಸಿಸುವವನಾದನು. ರಾಜನು ಬಹು ಮಾತನಾಡುಕ್ತಿದ್ದನು. ಅನನು ಮಾತನಾಡುವಾಗ ಇತರರ ಮಾತಿಗೆ ಅನಕಾಶನವೆಂಬುದೇ ಇರಲಿಲ್ಲ... ಬೋಧಿಸತ್ತನು ಅವನ ಬಹುಮಾತುಗಾರಿಕೆಯನ್ನು ಹೋಗಲಾಡಿಸಬಯಸಿ ಒಂದು ಉಪಾಯ ಕ್ಕಾಗಿ ಕಾಯುಕ್ತಿದ್ದನು.

ಕಾಲದಲ್ಲಿ ಹಿಮವಂತಪ್ರದೇಶದ ಒಂದು ಸರಸ್ಸಿನಲ್ಲಿ ಒಂದು ಆಮೆಯಿತ್ತು. ಎರಡು ಮರಿಹಂಸಗಳು ಆಹಾರಕ್ಕಾಗಿ ತಿರುಗಾಡುತ್ತ ಅದರೊಡನೆ ವಿಶ್ವಾಸ ಮಾಡಿದವು. ಅವುಗಳ ವಿಶ್ವಾಸ ದೃಢವಾಗಲ್ಕು ಅವು ಒಂದು ದಿನ ಆಮೆಯನ್ನು ಕುರಿತು “ಅಯ್ಯಾ ಆಮ, ನಾವು ಹಿಮ ವಂತದಲ್ಲಿ ಚಿತ್ರಕೂಟಿಸರ್ವತತಲದ ಕಾಂಚನ ಗುಹೆಯಲ್ಲಿ ವಾಸಿಸುವ ಸ್ಥಾನವು ರಮಣೀಯವಾದ ಪ್ರದೇಶ. ನಮ್ಮೊಡನೆ ಬರುವೆಯಾ?” ಎಂದವು.

ಇಪ್ಪತ್ತೆಂಟು ಕತೆ " ನಾನು ಏನು ಮಾಡಿದರೆ, ಹೋಗಲಾದೀತು?”

ನಾವು ನಿನ್ನನ್ನು ಹಿಡಿದು ಕೊಂಡುಹೋಗುವೆವು. ನೀನು ಬಾಯನ್ನು ಕಾಪಾಡಿಕೊಂಡು ಯಾರೊಡನೆಯೂ ಏನೂ ಮಾತನಾಡದಿರ ಬಲ್ಲೆಯಾದರೆ”

« ಕಾಪಾಡುನವೆನು. ನನ್ನನ್ನು ಜಡಿದು ಕೊಂಡುಹೋಗಿರಿ.''

ಅವು ಒಳ್ಳೆಯಜೆಂದು ಹೇಳಿ, ಒಂದು ಕೋಲನ್ನು ಆಮೆಯಿಂದ ಚ್ಛಿಸ್ಕಿ ಅದರ ಎರಡು ತುದಿಗಳನ್ನು ತಾವು ಕಚ್ಚಿ ಆಕಾಶದಲ್ಲಿ ನೆಗೆದವು. ಅದನ್ನು ಹೆಂಸಗಳು ಹಾಗೆ ಒಯ್ಯುನ್ರದನ್ನು ಗ್ರಾ ಹುಡುಗರು ಕಂಡು ನರ ಹೆಂಸಗಳು ಆಮೆಯನ್ನು 6 i ಒಯ್ಯುವವು” ಎಂದರು. ಆಮೆಯು “ನನ್ನ end ನನ್ನ ನ್ನು ಒಯ್ದರೆ, ನಿಮಗೇನು ಇಲ್ಲಿ? ಕೆಟ್ಟಿ ಹುಡುಗರಿರ |” ಎಂದು ಹೇಳಬಯಸಿ, ಹಂಸಗಳು ಶೀ ಘು ನೇಗದಿಂದ ಜಾಸ್‌ ರಾಜನ 'ಅರಮನೆಯ ಮೇಲೆ ಬರುವ ವೇಳೆಗೆ ಹೆಲ್ಲುಗಳ ನಡುವಿನಿಂದ ಕೋಲನ್ನು ಬಿಟ್ಟು, ಹೊರ ಅಂಗಳದಲ್ಲಿ ಬಿದ್ದು ಎರಡು ಭಾಗವಾಯಿತು. ಆಗ “ಆಮೆ ಹೊರಅಂಗಳದಲ್ಲಿ ಬಿದ್ದು ಎರಡಾಗಿ ಒಡೆಯಿತು” ಎಂದು ಒಂದು ಕೋಲಾಹೆಲವಾಯಿತು.

ರಾಜನು ಬೋಧಿಸತ್ತನನ್ನು ಕರೆದುಕೊಂಡು ಅಮಾತ್ಯರ ಪರಿ ವಾರಜೊಡನೆ ಆಸ ಳಕ್ಕೆ ಆಮೆಯನ್ನು ನೋಡಿ, ಪಂಡಿತ್ಕ ಇದು ಏನು ಮಾಡಿ. ಬಿ :? ಎಂದು ಬೋಧಿಸತ್ತ ನನ್ನು ಪ್ರಶ್ನಿಸಿದನು. ಬೋಧಿಸತ್ವನು ರಾಜನಿಗೆ ಬುದ್ಧಿವಾದ ಹೇಳ ೫08 ಉಪಾಯ ಹುಡುಕುತ್ತ ಕಾದಿದ್ದೆ. ಆಮೆಗೆ ಹಂಸಗಳೊಡನೆ ವಿಶ್ವಾಸ ಬೆಳೆದಿರಬೇಕು, ಇದನ್ನು ಹಿಮವಂತಕ್ಕೆ ಒಯ್ಯೋಣವೆಂದು ಅವು ಇದರಿಂದ ಕೋಲು ಕಚ್ಚಿಸಿ ಆಕಾಶದಲ್ಲಿ ಹಾರಿರಬೇಕು. ಇದು ಯಾವುದಾದರೂ ಮಾತು ಕೇಳಿ, ಬಾಯಿ ತಡೆಯದೆ ಏನೋ ಹೇಳ ಬಯಸಿ ಕೋಲು ಬಿಟ್ಟಿರಬೇಕು. ಹೀಗ್ಕೆ ಆಕಾಶದಿಂದ ಬಿದ್ದು ಸತ್ತಿರ ಬೇಕು. ಇದೇ ನಡೆದಿರಬೇಕು” ಎಂದು ಚಿಂತಿಸ್ಕಿ ಮಹಾರಾಜ

೨೪ ಬುದ್ಧನ ಕತೆಗಳು

ಅತಿ ಮಾತನಾಡುವನರೂ ಮಾತಿಗೆ ಮಿತಿಯಿಲ್ಲದವರೂ ಇಂತಹ ದುಃಖ ವನ್ನೇ ಪಡೆಯುನರು” ಎಂದು ಗಾಹೆಗಳನ್ನು ಹೇಳಿದನು:

ಅಮೆ ದನಿಯೆತ್ತಿ ತನ್ನನ್ನು ಕೊಂದಿತು. ಕೋಲನ್ನು ಬಿಗಿ ಹಿಡಿದಿದ್ದು ಕೂಡ, ಮಾತನಾಡಿ ತನ್ನನ್ನು ಕೊಂದಿತು. ಇದನ್ನು ಕಂಡು, ನರನೀರಶ್ರೇಷ್ಮ, ಕುಶಲಿಯಾಗು. ವೇಳೆಯರಿತು ಮಾತನಾಡು. ಬಹು ಮಾತಿನಿಂದ ಅಮೆ ಸತ್ತುದನ್ನು ಕಾಣುವೆಯಲ್ಲನೆ?”

ರಾಜನು ನನ್ನನ್ನು ಕುರಿತು ಹೇಳುವನು” ಎಂದು ತಿಳಿದು “ನನ್ನನ್ನು ಕುರಿತು ಹೇಳಿದೆಯ, ಪಂಡಿತ?” ಎಂದನು. ಬೋಧಿಸತ್ವನು ಮಹಾರಾಜ, ನೀನಾಗಲಿ ಬೇರೆ ಯಾರಾಗಲಿ, ಮಿತಿಯನ್ನು ಮಾರಿ ಮಾತನಾಡಿದರೆ ಇಂತಹೆ ದುಃಖ ಪ್ರಾಪ್ತವಾಗುವುದು? ಎಂದು ಪ್ರಕಟ ಪಡಿಸಿ ನುಡಿದನು. ಅಂದಿನಿಂದ ರಾಜನು ತಡೆದು, ಮಾತು ಕಡಮೆ ಮಾಡಿಕೊಂಡನು.

ಗರ್ಜಿತ ಜಾತಕ (೨೧೯)

ಹಿಂದೆ, ವಾರಣಾಸಿಯಲ್ಲಿ ಬ್ರಹ್ಮೆದತ್ತನು ರಾಜ್ಯವಾಳುತ್ತಿದ್ದಾಗ್ಯ ಬೋಧಿಸತ್ವನು ಹಿಮನಂತಸ್ರ್ರಜೇಶದಲ್ಲಿ ವಾನರನಾಗಿ ಹುಟ್ಟಿದನು. ವನಚರನೊಬ್ಬನು ಅವನನ್ನು ಹಿಡಿದೊಯ್ದು ರಾಜನಿಗೆ ಕೊಟ್ಟಿ ನು. ಬೋಧಿಸತ್ವನು ಬಹುಕಾಲ ರಾಜಗೃಹೆದಲ್ಲಿ ವಾಸಮಾಡಿ, ಮಾಡತಕ್ಕ ಕೆಲಸಗಳನ್ನೆಲ್ಲ ಮಾಡಿದನು; ಮನುಷ್ಯಲೋಕದಲ್ಲಿ ನಡೆಯುವ ಕಾರ್ಯ ಗಳನ್ನು ಬೇಕಾದಹಾಗೆ ತಿಳಿದುಕೊಂಡನು. ರಾಜನು ಅವನ ನಡತೆಗೆ ಪ್ರಸನ್ನನಾಗಿ, ವನಚರನನ್ನು ಕಕಿಕಳಿಸಿ “ಈ ವಾನರನನ್ನು ಹಿಡಿದ ಸ್ಥಳದಲ್ಲಿಯೇ ಬಿಟ್ಟು ಬಿಡು” ಎಂದು ಆಜ್ಞೆ ಮಾಡಿದನು. ಅವನು ಹಾಗೆಯೆ ಮಾಡಿದನು.

ಜೋಧಿಸತ್ವನು ಬಂದುದನ್ನು ವಾನರಗಣವು ತಿಳಿದು ಅವನನ್ನು

ಕಾಣಲೋಸುಗ ದೊಡ್ಡಕಲ್ಲಿನ ಮೇಲೆ ಗುಂಪು ಕೂಡಿ, ಆಡಬೇಕಾದ

ಇಪ ತ್ತೆ ಟುಕತೆ ೨೫

ಮೇಲೆ. ಅಯ್ಯಾ, ಇಷ್ಟು ಕಾಲ ಎಲ್ಲಿದ್ದೆ 18

ವಾರಣಾಸಿಯಲ್ಲಿ, ರಾಜನ ಮನೆಯಲ್ಲಿ.”

« ಫಿನಗೆ ಹೆಗೆ ಬಿಡುಗಡೆಯಾಯಿತು ?”

ರಾಜನು ನನ್ನನ್ನು ಆಟದಕೋತಿ ಮಾಡಿಕೊಂಡು, ನನ್ನ ನಡತೆಗೆ ಪ್ರಸನ್ನನಾಗಿ ನನ್ನನ್ನು ಬಿಡಿಸಿದನು.”

ಆಗ ವಾನರಗಳು “ಮನುಷ್ಯ ಲೋಕದಲ್ಲಿ ನಡೆಯುವ ಕಾರ್ಯ ಗಳನ್ನು ನೀನು ಬಲ್ಲೆ. ನಮಗೂ ಅದನ್ನು ಹೇಳು. ನಾವು ಕೇಳ ಬಯಸುವೆವು” ಎಂದು ಅವನನ್ನು ಕೇಳಿದವು.

4 ಜನರ ಕೆಲಸಗಳನ್ನು ಕುರಿತು ನನ್ನನ್ನು ಕೇಳಬೇಡಿ.?

« ಹೇಳು. ನಮಗೆ ಕೇಳಲು ಆಸೆ.”

ಬೋಧಿಸತ್ವನು “ಮನುಷ್ಯರೆಂಬವರು ಕ್ಸತ್ರಿ ತಿ ಯರಾಗಲಿ ಬ್ರಾಹ್ಮ ಇರಾಗಲಿ--ನನ್ನದು! ನನ್ನದು!' ಎನ್ನುವರು. ಅನಿತ್ಯ ಶ್ಯ ವೆಂಬುದನ್ನು ಕಾಣರು. ಕುರುಡು ಅಜ್ಜಾನಿಗಳನ್ನು ಕುರಿತು ತರ” ಎಂದು

ಹೇಳಿ ಗಾಹೆಗಳನ್ನು ಹೇಳಿದನು:

ಬುದ್ಧಿ ಕೆಟ್ಟಿ ಮನುಷ್ಯರು ಆರ್ಯಧರ್ಮವನ್ನು ಕಾಣದೆ, " ಹಿರಣ್ಯ ನನ್ನದು! ಸುವರ್ಣ ನನ್ನದು!' ಎಂದು ಹಗಲೂ ರಾತ್ರೆ ಕೂಗುವರು.''

4 ಮನೆಯಲ್ಲಿ ಇಬ್ಬರು ಗೃಹಪತಿಗಳು. ಅವರಲ್ಲಿ ಒಬ್ಬನಿಗೆ ಗಡ್ಡವಿಲ್ಲ. ಆದರೆ ಉದ್ದವಾದ ಮೊಲೆ, ಹೆಣೆದ ತಲೆಗೂದಲು, ತೂತು ಕೊರೆದ ಕನಿ. ಅನನನ್ನು ಬಹುಧನ ಕೊಟ್ಟು ಕೊಳ್ಳುವರು. ಅವನು ಅಲ್ಲಿಯ ಜನರನ್ನು ಗೋಳುಗುಟ್ಟಿ ಸುವನು.”

ಮಾತನ್ನು ಕೇಳಿ, ವಾನರಗಳೆಲ್ಲವೂ “ಹೇಳಬೇಡ, ಹೇಳಬೇಡ. ಕೇಳಲು ಯೋಗ್ಯವಲ್ಲದುದನ್ನು ಕೇಳಿದೆವು” ಎಂದು ಎರಡೂ ಕೈಗಳಿಂದ ಕಿವಿಗಳನ್ನು ಬಿಗಿಯಾಗಿ ಮುಚ್ಚ, “ಇಂತಹ ಸ್ಥಳದಲ್ಲಿ ನಾವು ಅಯೋಗ್ಯ ವಾದುದನ್ನು ಕೇಳಿದೆವು? ಎಂದು ಸ್ಥಳವನ್ನು ದೂಹಿಸುತ್ತ ಬೇರೆಕಡೆಗೆ

೨೬ ಬುದ್ಧನ ಕತೆಗಳು

ಹೋದವು. ಕಲ್ಲಿನ ತುದಿಗೆ "ಗರ್ಹಿತಪೃಪ್ಟನಾಷಾಣ' ವೆಂದು ಹೆಸರಾಯಿತು.

ಹರಿತಮಾತ ಜಾತಕ (೨೩೯)

ಹಿಂದೆ ವಾರಣಾಸಿಯಲ್ಲಿ ಬ್ರಹ್ಮದತ್ತನು ರಾಜ್ಯವಾಳುತ್ತಿದ್ದಾಗ, ಬೋಧಿಸತ್ತನು ನೀಲಿ ಕಪ್ಪೆಯಾಗಿ ಹುಟ್ಟ ದನು. ಕಾಲದಲ್ಲಿ ಮನುಷ್ಯರು ನದಿಯ ಹಳ್ಳ ತೂತುಗಳಲ್ಲಿ ಮಾನು ಹಿಡಿಯುವುದಕ್ಕೋಸ್ಕ ಅಲ್ಲಲ್ಲಿ ಮಾನು ಬಲೆಗಳನ್ನು ಒಡ್ಡಿದ್ದರು. ಒಂದು ಮಾನುಬಲೆಯನ್ನು ಬಹು ಮಾಾನುಗಳು ಹೊಳ್ಳ ವ್ರ. ಮಾನುಗಳನ್ನು ತಿನ್ನಲು ಒಂದು ನೀರುಹಾನು ತಾನೂ ವಿಸಾನುಬಲೆಯನ್ನು ಹೊಕ್ಕಿತು. ಮಾನು ಗಳು ಒಂದಾಗಿ ಅದನ್ನು ಕಚ್ಚಿ ಅದನ್ನು ರಕ್ತಮಯವನ್ನಾಗಿ ಮಾಡಿದವು. ಅದು ತನ್ನನ್ನು ಕಾಪಾಡಿಕೊಳ್ಳಲು ಬೇರೆ ದಾರಿ ಕಾಣದೆ ಮರಣಭಯ ದಿಂದ ನಡುಗುತ್ತ ಬಲೆಯ ಬಾಯಿಂದ ಹೊರಬಿದ್ದು, ನೋವುಪಡುತ್ತ್ಯ ನೀರಿನ ಅಂಚಿನಲ್ಲಿ ಬಿದ್ದಿತು. ನೀಲಿ ಕಪ್ಪೆ ಕೂಡ ಅದೇ ಕ್ಷಣ ಮೇಲೆ ಹಾರಿ ಬಲೆಯ ಬಾಯ ಮೇಲೆ ಕುಳಿತಿತು.

ಹಾವು ಬೇರೆ ಎಲ್ಲಿಯೂ ನ್ಯಾಯ ದೊರಕದೆ, ಅಲ್ಲಿ ಕುಳಿತ ಕಪ್ಪೆ ಯನ್ನು ಕುರಿತು ಅಯ್ಯಾ ನೀಲಿಕಪ್ಪೆ, ಮಾನುಗಳು ಮಾಡಿದ ಫೆಲಸ ನಿನಗೆ ಒಪ್ಪಿಗೆಯೆ ?” ಎಂದು ಕೇಳುತ್ತ ಮೊದಲ ಗಾಹೆ ಹೇಳಿತು:

ಅಯ್ಯಾ ಹಸುರುತಾಯಿಯ ಮಗನೆ, ನಾನು ಹಾವಾಗಿದ್ದರೂ ಕೂಡ ಬಲೆಯ ಬಾಯನ್ನು ಪ್ರನೇಶಿಸಿದಾಗ ಮಾನುಗಳು ನನ್ನನ್ನು ಕಚ್ಚಿವೆ. ಇದನ್ನು ನೀನು ಒಪ್ಪುವೆಯ ಟ್ಛ?

ಆಗ ಹಸುರು ಕಪ್ಪೆ " ನಾನು ಒಪ್ಪುತ್ತೇನಯ್ಯ. ಏಕೆ? ನಿನ್ನ ಸ್ಥಳಕ್ಕೆ ಬಂದೆ ಮಾನುಗಳನ್ನು ನೀನು ತಿಂದರೆ, ತಮ್ಮ ಸ್ಥಳಕ್ಕೆ ಬಂದ ನಿನ್ನ ನ್ನು ಮಾನುಗಳೂ ತಿನು ಪುನ. ತಮ್ಮ ತಮ್ಮ ಸ್ಥಳಗಳಲ್ಲಿ, ಪ್ರದೇಶ

ಇಸ್ಪತ್ತೆಂಟು ಕತೆ ೨೭

ಗಳಲ್ಲಿ, ಆಹಾರ ಭೂಮಿಗಳಲ್ಲಿ ಯಾರೂ ಬಲಹೀನರಲ್ಲ? ಎಂದು ಹೇಳಿ ಎರಡನೆಯ ಗಾಹೆ ಹೇಳಿತು:

4 ಲಾಭೆನಾಗುವ ವರೆಗೆ ಮನುಷ್ಯನು ಲೂಟ ಮಾಡಿಯೇ ಮಾಡುವನು. ಇನ್ನೊಬ್ಬ ನು ಲೂಟ ಮಾಡಿದಾಗ ಮೊದಲು ಲೂಟಿ ಮಾಡುತ್ತಿ ದ್ದವನಿಗೆ ಲೂಟ ಯಾಗುವುದು?

ಹೀಗೆಂದು ಬೋಧಿಸತ್ತನು ತೀರ್ಪುಕೊಡಲು, ನೀರು ಹಾವು ಬಲಹೀನವಾಗಿರುವುದನ್ನು ತಿಳಿದು, ಶತ್ರುವನ್ನು ಹಿಡಿಯೋಣನೆಂದು ಮಾನುಗಳು ಬಲೆಯ ಬಾಯಿಂದ ಹೊರಬಿದ್ದು, ಅದನ್ನು ಅಲ್ಲಿಯೇ ಸಾಯಿಸಿ, ಹೊರಟುಹೋದುವು.

ಮಹಾಪಿಂಗಲ ಜಾತಕ (೨೪೦)

ಹಂದೆ, ವಾರಣಾಸಿಯಲ್ಲಿ ಮಹಾಸಿಂಗಲನೆಂಬ ರಾಜನು ಅಧರ್ಮ ದಿಂದ ವಿಷಮವಾಗಿ ರಾಜ್ಯವಾಳುತ್ತಿದ್ದನು. ತನ್ನ ಇಚ್ಛೆಗೆ ವಶನಾಗಿ ಪಾಪಕರ್ಮಗಳನ್ನು ಮಾಡುತ್ತ, ಜನರಿಗೆ ದಂಡ ತೆರಿಗೆಗಳನ್ನು ಹಾಕುತ್ತ, ಅವರ ಅಂಗಾಂಗಗಳನ್ನು ಕಡಿಸುತ್ತ, ಅವರ ಹಣವನ್ನು ಸುಲಿದುಕೊಳ್ಳುತ್ತ ಕಬ್ಬಿನಯಂತ್ರದಲ್ಲಿ ಕಬ್ಬನ್ನು ಹೇಗೋ ಹಾಗೆ ಜನರನ್ನು ಪೀಡಿಸು ತ್ತಿದ್ದನು. ಅವನು ಕ್ರೂರಿಯಾಗಿ ಪರುಷನಾಗಿ ಸಾಹಸಿಕನಾಗಿದ್ದನು. ಇತರರಲ್ಲಿ ಕೊಂಚವೂ ಅನುನಯೆ ಅವನಿಗಿರಲಿಲ್ಲ ಮನೆಯಲ್ಲಿ ಹೆಂಗಸರು, ಗಂಡುಮಕ್ಕಳು, ಹೆಣ್ಣುಮಕ್ಕಳು, ಅಮಾತ್ಯರು, ಬ್ರಾಹ್ಮಣರು, ಗೃಹೆನತಿಗಳು ಮೊದಲಾಗಿ ಎಲ್ಲರಿಗೂ ಅಪ್ರಿಯನಾಗಿದ್ದ ನು. ಯಾರಿಗೂ ಅವನನ್ನು ಕಂಡರಾಗುತ್ತಿರಲಿಲ್ಲ. ಅವನು ಕಣ್ಣಿಗೆ ಬಿದ್ದ ಕಸದಂತೆ, ಅನ್ನದ ಮುದ್ದೆಯಲ್ಲಿನ ಕಲ್ಲಿನಂತೆ, ಹೆಜ್ಜೆಯನ್ನು ಸೀಳಿ ಹೊಕ್ಕ ಮುಳ್ಳಿ ನಂತೆ ಇದ್ದನು.

ಕಾಲದಲ್ಲಿ ಬೋಧಿಸತ್ವನು ಮಹಾಸಿಂಗಲನ ಮಗನಾಗಿ ಹುಟ್ಟಿ ದನು. ಮಹಾಪಿಂಗಲನು ಬಹುಕಾಲ ರಾಜ್ಯವಾಳಿ ಕಾಲವಾದನು.

೨೮ ಬುದ್ಧನ ಕತೆಗಳು

ಅನನು ಕಾಲವಾಗಲು ವಾರಣಾಸಿಯ ಜನಗಳೆಲ್ಲರೂ ಹೆರ್ಷಿಸಿ ತೃಪ್ತಿ ಯಿಂದ ಮಹಾಹಾಸವನ್ನು ಬೀರುತ್ತ, ಸಾವಿರ ಗಾಡಿ ಕಟ್ಟಿ ಗೆಯಿಂದ ಮಹಾಪಿಂಗಲನನ್ನು ಉರಿಸಿ, ಅನೇಕ ಸಾವಿರ ಗಡಿಗೆಗಳಿಂದ ಸುಡು ಗಾಡನ್ನು ಆರಿಸಿ, ಬೋಧಿಸತ್ತನಿಗೆ ರಾಜ್ಯಾ ಭಿಷೇಕಮಾಡಿ, " ಧಾರ್ಮಿಕ ನಾದ ರಾಜನು ನಮಗೆ ದೊರಕಿದನು' ಎಂದು ಹರ್ಷಗೊಂಡ್ಕು ತೃಪ್ತಿ ಹೊಂದಿ, ನಗರದಲ್ಲಿ ಉತ್ಸಾಹಭೇರಿಯನ್ನು ತಿರುಗಿಸಿ, ಎತ್ತಿದ ಧ್ವೈಜ ಪತಾಕೆಗಳಿಂದ ನಗರವನ್ನು ಅಲಂಕರಿಸಿ, ಬಾಗಿಲು ಬಾಗಿಲಿಗೂ ಮಂಟಿಪ ಮಾಡಿಸಿ, ಅಲಂಕರಿಸಿದ ಮಂಟಿಪದಲ್ಲಿ ಕೂರುವ ಕಡೆ ಅರಳು ಹೂಗಳನ್ನು ಹರಡಿ ಕುಳಿತು, ಕಿಂದರು, ಕುಡಿದರು. ಬೋಧಿಸತ್ವನು ಕೂಡ ಅಲಂಕೃತವಾದ ಮಹಾಸ್ಕಲದಲ್ಲ ಎತ್ತಿದ ಬೆಳ್ಗೊಡೆ ಪರ್ಯಂಕಗಳ ನಡುವೆ ಮಹಾಯಶಸ್ಸನ್ನು ಅನುಭವಿಸುತ್ತ ಕುಳಿತನು. ಅಮಾತ್ಯರು ಬ್ರಾಹ್ಮಣ ಗೃಹಪತಿಗಳು, ರಾಷ್ಟ್ರಿಕರು, ದ್ವಾರಪಾಲಕರು ಮೊದಲಾದವರು ರಾಜನ ಸುತ್ತ ಬಳಸಿ ಥಿಂತಿದ್ದರು.

ಆಗ ಒಬ್ಬ ದ್ವಾರಪಾಲಕನು ಕೊಂಚ ದೂರದಲ್ಲಿ ನಿಂತು ಉಸಿರು ಬಿಡುತ್ತ ಎಳೆಯುತ್ತ ಅಳುತ್ತಿದ್ದನು. ಬೋಧಿಸತ್ವನು ಅವನನ್ನು ಕಂಡು, ಅಯ್ಯಾ ದ್ವಾರಪಾಲಕ, ನನ್ನ ತಂದೆ ಸಾಯಲು ಸರ್ವರೂ ತೃಪಿ ಗೊಂಡು ಹರ್ಷಿಸುತ್ತ ಉತ್ಸವವಾಡುತ್ತಿರುವರು. ನೀನು ಮಾತ್ರ ಬಹು ವಾಗಿ ಅಳುತ್ತ ನಿಂತಿರುವೆ? ಏನು, ನಿನಗೆ ಮಾತ್ರ ಪ್ರಿಯನಾಗಿ ಮನ ಸ್ಸಿಗೆ ಹಿತವಾಗಿದ್ದ ನೇನು? ಎಂದು ಕೇಳುತ್ತ,

ನಿಂಗಲನು ಸರ್ವ ಜನರನ್ನೂ ಹಿಂಸಿಸುತ್ತಿದ್ದನು. ಅನನು ಸಾಯಲು ಎಲ್ಲರೂ ಪ್ರೀತರಾದರು. ಹಳದಿಕಣ್ಣಿನವನು ನಿನಗೆ ಪ್ರಿಯನಾಗಿದ್ದನೇನು? ನೀನೇಕೆ ಅಳುನೆ, ದ್ವಾರಪಾಲ?” ಎಂದು ಮೊದಲ ಗಾಹೆ ಹೇಳಿದನು.

ಅವನು ಆತನ ಮಾತು ಕೇಳಿ, ಪಿಂಗಲನು ಸತ್ತನೆಂದು ನಾನು ಶೋಕದಿಂದ ಅಳುತ್ತಿಲ್ಲ. ಅವನು ಹೋದುದು ನನ್ನ ತಲೆಗೆ ಸುಖ ವಾಯಿತು. ಹಿಂಗಲರಾಜನು ಮಾಳಿಗೆ ಇಳಿಯುವಾಗಲೂ ಏರುವಾಗಲೂ

(ಇಡ “Ad “VN “yeiqqn (e1pu] "5೧೫೪][19 UEIqqnsEyENuSA “VY `ಸ] : 499170 1 p I ಗಟ! Ul 3೨4230 ]೪೦1೫೦[೦೫೬ ೦.11 "1012331 4 ಬಟು

೯೯ ne) (ಉ೦ಭ೫ಂ೮ uaa) (Koc) ೩8೮೬ ha

(-೦೪ ೫೪ ‘OEY ESHAIULIS *d 13೮7 z0]0Ug) (mover er eeu’ ಇಸ್ವಿ weer) ೯೯ ಇಡಿ] (woe) seen x "Ra